ಬೆಂಗಳೂರು: ಇಂದು ಹೈಕೋರ್ಟ್(High Court) ನಲ್ಲಿ ಮನೆಯೂಟ ಬೇಕೆಂದು ಕೋರಿ ನಟ ದರ್ಶನ್ (Darshan) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಲಿದೆ.
ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ (Maagsitrate Court) ಜುಲೈ 25 ರಂದು ವಜಾ ಮಾಡಿತ್ತು. ಈ ಬೆನ್ನಲ್ಲಿಯೇ ಹೈಕೋರ್ಟ್ ನಲ್ಲಿ (High Court) ದರ್ಶನ್ ಪರ ವಕೀಲರ ಅರ್ಜಿ ಸಲ್ಲಿಸಿದ್ದರು.
ಕಾನೂನು ಎಲ್ಲರಿಗೂ ಒಂದೇ. ಎಲ್ಲ ಕೈದಿಗಳೂ ಜೈಲಿನಲ್ಲಿ ಸಮಾನ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ.
ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ. ಜೈಲಿನ ಊಟ ಕಳಪೆ ಗುಣಮಟ್ಟ ಎಂಬ ಆರೋಪ ಬಂದಿಲ್ಲ. ದರ್ಶನ್ ಗೆ ಜೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶ ಜೈಲಿನ ಊಟ ಒಳಗೊಂಡಿದೆ. ಪ್ರೋಟಿನ್ ಡಯಟ್ ಕೊಡಬೇಕೆಂದು ವೈದ್ಯರು ಹೇಳಿಲ್ಲ ಎಂದು ಪೊಲೀಸರು ವಾದಿಸಿದ್ದರು. ಈಗ ಹೈಕೋರ್ಟ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.