ಮೈಸೂರು: ಟಿಬೆಟ್(Tibet) ನಲ್ಲಿ ಭೂಕಂಪ(Earthquake)ಸಂಭವಿಸಿದ ಪರಿಣಾಮ ಹಲವರು ಸಾವನ್ನಪ್ಪಿರುವ ಘಟನೆಗೆ ಎಲ್ಲೆಡೆ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ಥರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಸಂತ್ರಸ್ತರಿಗಾಗಿ ದಲಾಯಿಲಾಮ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿನ ಬೈಲುಕುಪ್ಪೆಯ ತಶೀಲಾಂಪು ದೇವಾಲಯದಲ್ಲಿ(temple) ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಟಿಬೇಟಿಯನ್ ನಾಗರಿಕರು, ಬೌದ್ದ ಬಿಕ್ಕುಗಳು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರುವ ದಲಾಯಿಲಾಮ, ನನ್ನ ಆರೋಗ್ಯ(health) ಉತ್ತಮವಾಗಿದೆ. ಯಾರು ಹೆದರುವ ಅವಶ್ಯಕತೆ ಇಲ್ಲ. ಅಲ್ಲದೇ, ಯಾರೂ ಆತಂಕ ಪಡಬಾರದು ಎಂದು ಹೇಳಿದ್ದಾರೆ.