ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಆರೋಪಿಗಳಾಗಿರುವ ಡಿ ಗ್ಯಾಂಗ್ ಇಂದು ಕೋರ್ಟ್ ಗೆ ಹಾಜರಾಗುವ ಸಾಧ್ಯತೆ ಇದೆ.
ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರಾಬೇಕು. ಹೀಗಾಗಿ ಇಂದು ಸಿಸಿಎಚ್ 57ರ ಕೋರ್ಟ್‌ಗೆ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಆಗಮಿಸುವ ಸಾಧ್ಯತೆ ಇದೆ.
ಕೋರ್ಟ್ ಜಾಮೀನು ನೀಡುವ ಸಂದರ್ಭದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು. ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಒಂದು ವೇಳೆ ಗೈರು ಆಗುವುದಿದ್ದರೆ ವಿನಾಯಿತಿ ಕೋರಿ ತಮ್ಮ ಪರ ವಕೀಲರಿಂದ ಅರ್ಜಿ ಸಲ್ಲಿಸಬೇಕಾಗುತ್ತದೆ. ಶೀಘ್ರದಲ್ಲೇ ಅರೋಪಿಗಳ ವಿರುದ್ದದ ಪ್ರಕರಣ ವಿಚಾಚರಣೆಗೆ ನಿಗದಿಪಡಿಸುವ ಸಾಧ್ಯತೆ ಕೂಡ ಇದೆ.
ಹೀಗಾಗಿ ಇಂದು ಕೋರ್ಟ್ ಗೆ ಬರುವ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾಗೌಡ ಮುಖಾಮುಖಿಯಾಗುವ ಸಾಧ್ಯತೆ ಇದೆ. ಪ್ರಕರಣದ ಎಲ್ಲಾ 17 ಆರೋಪಿಗಳು ಕೋರ್ಟ್ ಟ್ರಯಲ್ ಮುಕ್ತಾಯದವರೆಗೂ ವಿಚಾರಣೆಗೆ ಹಾಜರಾಗಬೇಕು. ಹೀಗಾಗಿ ತಿಂಗಳಿಗೆ ಒಂದು ಬಾರಿಯಾದರೂ ದರ್ಶನ್ ಮತ್ತು ಪವಿತ್ರಾ ಮುಖಾಮುಖಿಯಾಗಲಿದ್ದು, ಅವರ ಸ್ನೇಹ ಮುಂದೆ ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.