ಚಾಲೆಜಿಂಗ್ ಸ್ಠಾರ್ ದರ್ಶನ್ ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಜೊತೆ ದಚ್ಚು 10 ದಿನಗಳ ಕಾಲ ವಿದೇಶಿ ಪ್ರವಾಸ ಮುಗಿಸಿ ಆಗಮಿಸಿದ್ದಾರೆ.
ಕೋರ್ಟ್ ಅನುಮತಿ ಪಡೆದು ದಾಸ ಡೆವಿಲ್ ಸಿನಿಮಾ ಸಾಂಗ್ ಶೂಟಿಂಗ್‌ಗಾಗಿ ಥಾಯ್ಲೆಂಡ್‌ಗೆ ಹಾರಿದ್ದರು. ಇದೀಗ ಸಿನಿಮಾ ಸಾಂಗ್ ಶೂಟಿಂಗ್ ಮುಗಿಸಿ ಪತ್ನಿ, ನಟ ಧನ್ವೀರ್ ಹಾಗೂ ಚಿತ್ರತಂಡದೊಂದಿಗೆ ಆಗಮಿಸಿದ್ದಾರೆ.
ಥಾಯ್ಲೆಂಡ್‌ಗೆ ತೆರಳಿದ್ದ ವೇಳೆ ಕೊಲೆ ಆರೋಪಿ ಬಿಪಿನ್ ರೈ ಬರ್ತ್ ಡೇ ಪಾರ್ಟಿಯಲ್ಲೂ ಭಾಗಿಯಾಗಿದ್ರೂ. ಕೇರಳ ಬಳಿಕ ಥಾಯ್ಲೆಂಡ್‌ನಲ್ಲಿ ಕೊಲೆ ಆರೋಪಿಗಳ ಜೊತೆ ಕಾಣಿಸಿಕೊಳ್ತಿರುವುದು ಮುಂದೆ ದರ್ಶನ್ ಸಂಕಷ್ಟ ತಂದೊಡ್ಡುವ ಲಕ್ಷಣಗಳು ದಟ್ಟವಾಗಿವೆ.