ಬೆಂಗಳೂರು: ಶಾಸಕ ಮುನಿರತ್ನ ಮತ್ತೊಮ್ಮೆ ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ.
ಅಣ್ಣಮ್ಮ ದೇವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಗೆ ಆಣೆ ಪ್ರಮಾಣ ಮಾಡುವಂತೆ ಆಹ್ವಾನ ನೀಡಿದ್ದಾರೆ. ಮುನಿರತ್ನನ ಮೇಲೆ ನಾವು ಸುಳ್ಳು ರೇಪ್ ಕೇಸ್ ಹಾಕಿಲ್ಲಾ? ಅಂತಾ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನೀವು ಹೇಳಿದ ಕಡೆಗೆ ನಾನು ಬಂದು ಪ್ರಮಾಣ ಮಾಡುತ್ತೇನೆ. ನೀವು ಅತ್ಯಾಚಾರ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡಿದ್ದೀರಿ. ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲು ನೀವು ಪ್ಲಾನ್ ಮಾಡಿಲ್ವಾ? ಒಂದು ವೇಳೆ ನೀವು ಮಾಡಿಲ್ಲ ಅಂದ್ರೆ ಪ್ರಮಾಣ ಮಾಡಿ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುವ ಭರದಲ್ಲಿ ಡಿ.ಕೆ.ರವಿ ಅವರ ಹೆಸರನ್ನು ಕೂಡ ಮುನಿರತ್ನ ತಂದಿದ್ದಾರೆ. “ಡಿ.ಕೆ.ರವಿ ಜೀವಂತವಾಗಿ ಇದ್ದಿದ್ದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ”. ಅವರೊಬ್ಬರು ಬದುಕಿದ್ದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ನನ್ನ ಮೇಲೆ ಅತ್ಯಾಚಾರ ಕೇಸ್ ಬೀಳುತ್ತಿರಲಿಲ್ಲ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ.
ನಾನು 25ನೇ ವಯಸ್ಸಿನಲ್ಲಿಯೇ ಕನ್ನಡ ಸಿನಿಮಾ ನಿರ್ಮಾಪಕನಾದವನು. ಗಾಂಧಿನಗರದಲ್ಲಿ ವಿತರಕನಾಗಿದ್ದೆ. ಗಾಂಧಿನಗರದಲ್ಲಿ ನಿರ್ಮಾಪಕನಾಗಿದ್ದೆ. ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇರಲಿಲ್ಲ. ಡಾ. ಮಂಜುನಾಥ್ ಒಳ್ಳೆಯವರು ಎಂದು ಹೇಳಿದ್ದೇ ತಪ್ಪಾಗಿದೆ. ನನ್ನ ಮೇಲೆ ಸುಳ್ಳು ಕೇಸ್ ಹಾಕಿಸುತ್ತಿದ್ದಾರೆ. ಅದಕ್ಕೆ ಹೇಳಿದ್ದು, ಡಿ.ಕೆ.ರವಿ ಬದುಕಿದ್ದರೆ, ನಾನು ಜೈಲಿಗೆ ಹೋಗುತ್ತಿರಲಿಲ್ಲ. ಡಿ.ಕೆ. ಸುರೇಶ್ ಸೋಲ್ತಾನೂ ಇರಲಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲಿಕ್ಕೂ ಆಗುತ್ತಿರಲಿಲ್ಲ. ಅರ್ಥ ಆಯ್ತಾ ಎಲ್ಲರಿಗೂ ಎಂದು ಪ್ರಶ್ನಿಸಿದ್ದಾರೆ.