ಮೈಸೂರು: ಹೀಲಿಯಂ ಗ್ಯಾಸ್ ಬ್ಲಾಸ್ಟ್ ಆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಅರಮನೆಯ ಮುಂಭಾಗ ಜಯಮಾರ್ತಾಂಡ ಗೇಟ್‌ನ ಬಳಿ ನಡೆದಿದೆ.
ಹೀಲಿಯಂ ಬಲೂನು ಮಾರಾಟ ಮಾಡುತ್ತಿದ್ದು, ಅದರ ಸಿಲಿಂಡರ್ ಸ್ಪೋಟಗೊಂಡಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿಯೇ ನಿಂತಿದ್ದ ಬಲೂನು ವ್ಯಾಪಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ಕು ಮಂದಿಗೆ ಭೀಕರ ಗಾಯಗಳಾಗಿವೆ. ಗಾಯಾಳುಗಳನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರಿಸ್‌ಮಸ್ ರಜೆ ಹಿನ್ನೆಲೆ ಮೈಸೂರು ಅರಮನೆ ವೀಕ್ಷಣೆಗೆ ಹೆಚ್ಚಿನ ಮಂದಿ ಆಗಮಿಸಿದ್ದರು. ಅರಮನೆ ನೋಡಿ ಹೊರ ಬಂದ ಹಲವರು ಪುಟ್ಬಾತ್ ವ್ಯಾಪಾರಿಗಳ ಬಳಿ ಖರೀದಿ ಮಾಡುತ್ತಿದ್ದರು. ಅದೇ ಪುಟ್ಬಾತ್‌ನಲ್ಲಿ ಫ್ಲೈಯಿಂಗ್ ಬಲೂನು ವ್ಯಾಪಾರಿ ಇದ್ದು, ಸೈಕಲ್‌ನಲ್ಲಿ ಹೀಲಿಯಂ ಬಲೂನು ಸಿಲಿಂಡರ್ ಕೂಡ ಇತ್ತು. ಏಕಾಏಕಿ ಸ್ಪೋಟಗೊಂಡಿದ್ದು, ಸುತ್ತಲೂ ನಿಂತವರು ಹಾನಿಗೊಳಗಾಗಿದ್ದಾರೆ. ರಾತ್ರಿ 8.30 ಕ್ಕೆ ಈ ಘಟನೆ ಸಂಭವಿಸಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಬಲೂನ್‌ಗಳಿಗೆ ಹೀಲಿಯಂ ತುಂಬುವಾಗ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡವರ ಪೈಕಿ ಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದರೆ. ರಾಣೆಬೆನ್ನೂರಿನ 34 ವರ್ಷದ ಕೊಟ್ರೇಶ್ ಎರಡೂ ಕಾಲಿಗೆ ಗಂಭೀರ ಗಾಯವಾಗಿದೆ. ಕೊಟ್ರೇಶ್ ಕುಟುಂಬ ಪ್ರವಾಸಕ್ಕೆಂದು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ದುರಂತ ನಡೆದಿದೆ ಎಂದು ಕೊಟ್ರೇಶ್ ಪತ್ನಿ ಪ್ರಿಯಾಂಕ ಮಾಹಿತಿ ನೀಡಿದ್ದಾರೆ.ಬೆಂಗಳೂರು ಮೂಲದ ಲಕ್ಷ್ಮೀ , ಕೊಲ್ಕತ್ತಾದ ಶಾಹಿನ್ ಶಬ್ಬೀರ್ , ರಾಣಿಬೆನ್ನೂರು ಕೊಟ್ರೋಶಿ , ನಂಜನಗೂಡು ಮೂಲದ ಮಂಜುಳಗೆ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ದಾವಣಗೆರೆ | ತಾನು ಬೆಳೆದಿದ್ದ ತಾಳೆ ಮರಗಳನ್ನು ರಕ್ಷಿಸಲು ಹೋಗಿ ರೈತ ಸಜೀವ ದಹನ



















