ಬೆಂಗಳೂರು : ಪೊಲೀಸ್ ಕಾನ್ಸ್‌ಟೇಬಲ್ ಅಕೌಂಟ್‌ಗೆ ಸೈಬರ್ ಕಳ್ಳರು ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಬರೋಬ್ಬರಿ ಒಂದು ಲಕ್ಷ ಹಣ ದೋಚಿ, ಸಿಮೆಂಟ್ ಕಂಪನಿಯೊಂದರ ಅಕೌಂಟ್‌ಗೆ ಟ್ರಾನ್ಸ್ಫರ್ ಮಾಡಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಲಕ್ಷ್ಮಣ ಕಮಲಾಕರ್ ಎಂಬಾತನ ಅಕೌಂಟ್‌ಗೆ ಕನ್ನ ಹಾಕಲಾಗಿದ್ದು, ಈ ಹಿಂದೆ ಇ – ಚಲನ್ ಎಂಬ ಕ್ಲಿಪ್ ಕಳಿಸಿ, ನೀವು ಟ್ರಾಫಿಕ್ ವಯೋಲೇಷನ್ ಮಾಡಿದಿರಿ 500 ರೂಪಾಯಿ ಹಣವನ್ನ ಕಟ್ಟಿ ಎಂದು ನೊಟೀಸ್ ಮಾದರಿಯ ಇ-ಚಲನ್ ಬಂದಿತ್ತು. ಪೊಲೀಸ್ ಕಾನ್ಸ್‌ಟೇಬಲ್ ಲಕ್ಷ್ಮಣ್ ಅದನ್ನ ಇಗ್ನೋರ್ ಮಾಡಿದ್ದರು.
ಬಳಿಕ ಒಂದು ವಾರದಲ್ಲಿ ಪಿಸಿ ಅಕೌಂಟ್ ಅಟ್ಯಾಕ್ ಮಾಡಿದ ಸೈಬರ್ ಕಳ್ಳರು, ಮೊದಲು 50 ಸಾವಿರ ಹಣ ಕಡಿತವಾಗಿದೆ. ಹಣ ಕಟ್ ಆಗಿರುವ ಮೆಸೇಜ್ ಬಂದ ಕೂಡಲೇ ಮೊಬೈಲ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಮತ್ತೆ 50 ಸಾವಿರ ಹಣ ಕಟ್ ಆಗಿದೆ. ಅಂದರೆ ಎರಡು ಬಾರಿ ಸೇರಿ ಒಟ್ಟು ಒಂದು ಲಕ್ಷ ಹಣ ದೋಚಿದ್ದಾರೆ.
ನಂತರ ಬ್ಯಾಂಕ್ ಆಫ್ ಬರೋಡದಲ್ಲಿ ಪರಿಶೀಲನೆ ನಡೆಸಿದಾಗ ಸಂಜಯ್ ಗೌಡ ಎಂಬುವವರ ಸಿಮೆಂಟ್ ಕಂಪನಿ ಹೆಸರಿನಲ್ಲಿರುವ ಯಸ್ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್ಫರ್ ಆಗಿರುವುದು ಬೆಳಕಿಗೆ ಬಂದಿದೆ. ಈ ಘಟನಾ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಲಕ್ಷ್ಮಣ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಬಾಗೇಪಲ್ಲಿ ಶಾಸಕ S.N ಸುಬ್ಬಾರೆಡ್ಡಿಗೆ ಬಿಗ್ ರಿಲೀಫ್ | ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!



















