ಮೈಸೂರು: ಜಿಲ್ಲೆಯಲ್ಲೂ ನಾಯಿ ದಾಳಿ ಮುಂದುವರೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಸಾಂಸ್ಕೃತಿಕ ನಗರದಲ್ಲಿ ನಾಯಿಗಳ ದಾಳಿ ಮಿತಿ ಮೀರುತ್ತಿದ್ದು, ನಾಯಿ ದಾಳಿಯ ಅಂಕಿ- ಸಂಖ್ಯೆ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ತಿಂಗಳವರಗೆ 11,456 ನಾಯಿ ದಾಳಿ ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಜುಲೈನಿಂದ ಆಗಸ್ಟ್ 15ರ ವೇಳೆಗೆ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಜನವರಿಯಲ್ಲಿ 813 ಪ್ರಕರಣ, ಫೆಬ್ರವರಿಯಲ್ಲಿ 1,522, ಮಾರ್ಚ್ ನಲ್ಲಿ 835 ಪ್ರಕರಣ ದಾಖಲಾಗಿವೆ.
ಅಲ್ಲದೇ, ಏಪ್ರಿಲ್ ತಿಂಗಳಲ್ಲಿ 829, ಮೇ ತಿಂಗಳಲ್ಲಿ 973, ಜೂನ್ ತಿಂಗಳಲ್ಲಿ 1,480, ಜುಲೈ ತಿಂಗಳಲ್ಲಿ 1032 ಪ್ರಕರಣ ದಾಖಲಾಗಿವೆ. ಮೈಸೂರು ನಗರವೊಂದರಲ್ಲೇ 2,820 ಪ್ರಕರಣಗಳು ದಾಖಲಾಗಿವೆ. ಈಗ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ನಾಗರಿಕರು ಪರದಾಟ ನಡೆಸುತ್ತಿದ್ದಾರೆ.



















