ಚೆನ್ನೈ: ಸಿಎಸ್ಕೆ ತಂಡಕ್ಕೆ ಶುಕ್ರವಾರ (ಮಾರ್ಚ್ 28) ರಾತ್ರಿ ಮರೆಯಲಾಗದ ದುಃಖದ ರಾತ್ರಿಯಾಗಿತ್ತು. ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ ) ವಿರುದ್ಧ 50 ರನ್ಗಳ ದಾಖಲೆಯ ಅಂತರದ ಸೋಲು ಕಂಡಿದೆ. ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ 197 ರನ್ಗಳ ಗುರಿಯನ್ನು ಬೆನ್ನಟ್ಟಲು ಬಂದ ಸಿಎಸ್ಕೆ 20 ಓವರ್ಗಳಲ್ಲಿ ಎಂಟು ವಿಕೆಟ್ಗೆ 146 ಗಳಿಸಲು ಮಾತ್ರ ಶಕ್ತವಾಯಿತು. ಈ 50 ರನ್ಗಳ ಸಿಎಸ್ಕೆ ತಂಡದ ತವರು ಮೈದಾನದಲ್ಲಿ ಅತಿದೊಡ್ಡ ಸೋಲು ಮತ್ತು ಒಟ್ಟಾರೆ ಐಪಿಎಲ್ನಲ್ಲಿ ಅವರ ಪಾಲಿಗೆ ಮೂರನೇ ಅತಿದೊಡ್ಡ ಸೋಲು.
ಪಂದ್ಯ ಹೇಗೆ ನಡೆಯಿತು?
ಸಿಎಸ್ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಆರ್ಸಿಬಿಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಮೂರು ಬಾರಿ ಜೀವದಾನ ಪಡೆದು ಅರ್ಧಶತಕ ಬಾರಿಸಿ ತಂಡಕ್ಕೆ 7 ವಿಕೆಟ್ಗೆ 196 ರನ್ ಬಾರಿಸಲು ನೆರವಾದರು. ಸಿಎಸ್ಕೆ ಫೀಲ್ಡಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿತು.
ಬ್ಯಾಟಿಂಗ್ನಲ್ಲಿ ಸಿಎಸ್ಕೆ ಯಾವುದೇ ದೊಡ್ಡ ಜತೆಯಾಟ ನಿರ್ಮಿಸಲಾಗಲಿಲ್ಲ. ರಾಹುಲ್ ತ್ರಿಪಾಠಿ (31) ಮತ್ತು ರವೀಂದ್ರ ಜಡೇಜಾ (25) ಮಾತ್ರ ಸ್ವಲ್ಪ ಸ್ಕೋರ್ ಮಾಡಿದರು. ಆರ್ಸಿಬಿ ಬೌಲರ್ಗಳು ಸಿಎಸ್ಕೆ ಬ್ಯಾಟರ್ಗಳನ್ನು ನಿಯಂತ್ರಿಸಿದರು.
ಗಾಯಕ್ವಾಡ್ ಪ್ರತಿಕ್ರಿಯೆ
ಸೋಲಿನ ನಂತರ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಮಾತನಾಡಿ, *”ನಾವು 20 ರನ್ ಹೆಚ್ಚು ಬಿಟ್ಟುಕೊಟ್ಟೆವು. ಈ ಪಿಚ್ನಲ್ಲಿ 170 ರನ್ಗಳು ಗರಿಷ್ಠ. ಫೀಲ್ಡಿಂಗ್ ಕಳಪೆಯಾಗಿತ್ತು. 170 ರನ್ ಮೀರುವುದೇ ಕಷ್ಟ. ಆದರೆ 20 ರನ್ಗಳ ಹೆಚ್ಚಿನ ಗುರಿಯನ್ನು ಬೆನ್ನಟ್ಟಲು ಪವರ್ಪ್ಲೇನಲ್ಲಿ ವಿಭಿನ್ನವಾಗಿ ಆಡಬೇಕಿತ್ತು ಎಂದು ಹೇಳಿದ್ದಾರೆ.
ಸಿಎಸ್ಕೆಯ ಅತಿದೊಡ್ಡ ಸೋಲುಗಳ ಪಟ್ಟಿ ಇಲ್ಲಿದೆ
- 60 ರನ್ vs ಮುಂಬೈ , ವಾಂಖೇಡೆ ಸ್ಟೇಡಿಯಂ, ಮುಂಬೈ (2013) 2. 54 ರನ್ vs ಪಂಜಾಬ್ , ಬ್ರಬೋರ್ನ್ ಸ್ಟೇಡಿಯಂ, ಮುಂಬೈ (2022)
- 50 ರನ್ vs ಆರ್ಸಿಬಿ , ಚಿದಂಬರಂ ಸ್ಟೇಡಿಯಂ, ಚೆನ್ನೈ (2025)
- 46 ರನ್ vs ಮುಂಬೈ , ಚೆನ್ನೈ (2019)
- 44 ರನ್ vs ಪಂಜಾಬ್ , ಬಾರಾಬತಿ ಸ್ಟೇಡಿಯಂ, ಕಟಕ್ (2014)
- 44 ರನ್ vs ಡೆಲ್ಲಿ , ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ (2020)