ದಾವಣಗೆರೆ: ಸಾಲಬಾಧೆಯಿಂದಾಗಿ ಸಿಆರ್ ಪಿಎಫ್ ಯೋಧ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ (Vijayawad) ನಡೆದಿದೆ. ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ನಿವಾಸಿ ಉಮೇಶ್(34) ಆತ್ಮಹತ್ಯೆಗೆ ಶರಣಾಗಿರುವ ಯೋಧ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಯೋಧ ಕೈದಾಳೆ ಗ್ರಾಮಕ್ಕೆ ಉಮೇಶ್ ಆಗಮಿಸಿದ್ದರು. ಮೂರು ದಿನದ ಹಿಂದೆಯಷ್ಟೇ ರಜೆ ಮುಗಿಸಿ ಛತ್ತೀಸ್‌ಗಢದ 217 ಬೆಟಾಲಿಯನ್ ಕೊಂಟಾದಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಕೆಲಸಕ್ಕೆ ಸೇರಿದ ಮಾರನೇ ದಿನ ಅವರನ್ನು ಎಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ. ನಂತರ ವಿಜಯವಾಡದಲ್ಲಿ ರೈಲಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಈ ಕುರಿತು ಉಮೇಶ್ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಬುಧವಾರ ಬೆಳಿಗ್ಗೆ ದಾವಣಗೆರೆ ತಾಲೂಕಿನ ಕೈದಾಳೆ ಸ್ವಗ್ರಾಮಕ್ಕೆ ಮೃತದೇಹವನ್ನು ರವಾನಿಸಲಾಗುವುದು ಎಂದು ಮೂಲಗಳು ಹೇಳಿವೆ.