ಮೈಸೂರು: ಮೈಸೂರು- ಕುಶಾಲನಗರ ರಸ್ತೆಯಲ್ಲಿನ ಬೈಲಕುಪ್ಪೆಯಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಿಸಿದ್ದು, ಈಗ ಅದು ಅಪಘಾತ ವಲಯವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಡಿವೈಡರ್ ಸ್ಥಳದಲ್ಲಿ ಸರಿಯಾದ ಸೂಚನಾ ಫಲಕ, ರಿಫ್ಲೆಕ್ಟೆಡ್ ಲೈಟ್ ಇಲ್ಲದಿರುವುದರಿಂದಾಗಿ ಅಲ್ಲಿ ಲೆಕ್ಕಕ್ಕೆ ಸಿಗದಷ್ಟು ವಾಹನಗಳು ಪಲ್ಟಿಯಾಗುತ್ತಿವೆ. ಈ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ನಷ್ಟು ಡಿವೈಡರ್ ನಿರ್ಮಾಣ ಮಾಡಲಾಗಿದೆ. ಆದರೆ, ಡಿವೈಡರ್ ನ ಎರಡೂ ಬದಿಯ ಜಾಗದಲ್ಲಿ ಪ್ರತಿ ದಿನ ಒಂದಾದರೂ ವಾಹನ ಪಲ್ಟಿಯಾಗುತ್ತಿವೆ.
ಪ್ರತಾಪ್ ಸಿಂಹ ಸಂಸದರಾಗಿದ್ದ ಸಂದರ್ಭದಲ್ಲಿ ಕಾಮಗಾರಿ ನಡೆಸಲಾಗಿತ್ತು. ಪ್ರತಿದಿನ ಅಪಘಾತಗಳು ನಡೆಯುತ್ತದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬೆಲೆ ಸಿಗುತ್ತಿಲ್ಲ. ಸಾರ್ವಜನಿಕರ ಪ್ರಾಣಕ್ಕೆ ಬೆಲೆಯೇ ಇಲ್ಲವಾ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.