ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1) 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಸಚಿವೆ ಸೀತಾರಾಮನ್ ಅವರು ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಕೇಂದ್ರದ ಬಜೆಟ್ ಮೇಲೆ ರಾಜ್ಯಕ್ಕೂ ಹಲವು ನಿರೀಕ್ಷೆಗಳಿವೆ. ಕೇಂದ್ರದಿಂದ ಈ ಬಾರಿಯಾದರೂ ಕರ್ನಾಟಕಕ್ಕೆ ಹೆಚ್ಚಿನ ನೆರವು ಸಿಗುತ್ತಾ? ಯಾವೆಲ್ಲಾ ನಿರೀಕ್ಷೆಗಳಿವೆ?
ಕೇಂದ್ರದ ಬಜೆಟ್ ಮೇಲೆ ರಾಜ್ಯದ ನಿರೀಕ್ಷೆಗಳು
ರಾಜ್ಯದ ರೈಲ್ವೆ, ನೀರಾವರಿ, ಐಟಿ, ಹೆದ್ದಾರಿ, ಆರೋಗ್ಯ, ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡುತ್ತಾ ಎನ್ನುವ ನಿರೀಕ್ಷೆ ಹೆಚ್ಚಿದೆ.
* ಮಂಡ್ಯದ ಮೈಶುಗರ್ ಕಾರ್ಖಾನೆಗೆ ಅನುದಾನ ಸಿಗುವ ನಿರೀಕ್ಷೆ
* ಬೆಂಗಳೂರು ಚಾಮರಾಜನಗರ ರೈಲ್ವೆ ಯೋಜನೆಗೆ ಮರುಚಾಲನೆ ಸಿಗುವ ನಿರೀಕ್ಷೆ
*ಬೀದರ್ ಜಿಲ್ಲೆಗೆ ಸಿಗಲಿದೆಯಾ ಹೊಸ ಕೈಗಾರಿಕೆ
*ಬೀದರ್‌ನ ವಿಶ್ವ ಪಾರಂಪರಿಕ ಸ್ಥಳಗಳಿಗೆ ಕೇಂದ್ರದ ಅನುದಾನ ಸಿಗುವ ನಿರೀಕ್ಷೆ
*ಕಾರವಾರ ಇಳಕಲ್ ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡುವ ನಿರೀಕ್ಷೆ
*ಗದಗ ಲಕ್ಷ್ಮೇಶ್ವರ್ ಯಲವಗಿ, ಗದಗ-ಮುಂಡರಗಿ ರೈಲ್ವೆ ಯೋಜನೆಯ ನಿರೀಕ್ಷೆ
*ಗದಗಕ್ಕೆ ವಂದೇ ಭಾರತ್ ರೈಲು ಯೋಜನೆ ಸಿಗುವ ಭರವಸೆ
*ಬಾಗಲಕೋಟೆಯಲ್ಲಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಕೈಗಾರಿಕೆ ನಿರೀಕ್ಷೆ
* ಬಾಗಲಕೋಟೆ-ಕುಡುಚಿ ರೈಲು ಕಾಮಗಾರಿ ಪೂರ್ಣಗೊಳಿಸಿ ಹೊಸ ರೈಲು ಮಾರ್ಗ ಘೋಷಣೆಯಾಗುವ ನಿರೀಕ್ಷೆ
*ರಾಯಚೂರಿನ ನವಲಿ ಡ್ಯಾಮ್‌ಗೆ ಕೇಂದ್ರದ ಅನುದಾನ ಸಿಗುವ ನಿರೀಕ್ಷೆ
*ಈ ಬಾರಿಯಾದ್ರೂ ರಾಯಚೂರಿಗೆ ಸಿಗಲಿದ್ಯಾ ಏಮ್ಸ್?
*ಶಿವಮೊಗ್ಗದ VISL ಕಾರ್ಖಾನೆಯ ಪುನಶ್ಚೇತನಕ್ಕೆ 15 ಸಾವಿರ ಕೋಟಿ ಸಿಗುವ ನಿರೀಕ್ಷೆ
*ಕೊಲ್ಲೂರು-ಮೂಕಾಂಬಿಕಾ ಕಾರಿಡಾರ್ ಘೋಷಣೆಯಾಗುವ ನಿರೀಕ್ಷೆ
*ಲೋಕಾಪುರ, ಸವದತ್ತಿ ಧಾರವಾಡ ನೂತನ ರೈಲ್ವೆ ಮಾರ್ಗದ ನಿರೀಕ್ಷೆ
*ಹೊಸ ಕೈಗಾರಿಕಾ ಟೆಕ್ ಪಾರ್ಕ್ ನಿರೀಕ್ಷೆಯಲ್ಲಿ ಬೆಳಗಾವಿ ಜನ
*ಚಿಕ್ಕಮಗಳೂರಿಗೆ ಸಿಗಲಿದ್ಯಾ ಇಎಸ್‌ಐ ಆಸ್ಪತ್ರೆ
*ಶೃಂಗೇರಿ-ಶಿವಮೊಗ್ಗ ಹೊಸ ರೈಲು ಮಾರ್ಗ
* ಕಾಫೀ ಟೆಕ್‌ಪಾರ್ಕ್ ನಿರೀಕ್ಷೆ
*ಸರ್‌ಫೇಸಿ ಕಾಯ್ದೆಯಿಂದ ಕಾಫಿಯನ್ನ ಹೊರಗಿಡುವ ನೀರಿಕ್ಷೆ
2019ರಲ್ಲಿ ಘೋಷಣೆಯಾಗಿದ್ದ ಕುಶಾಲ್‌ನಗರ -ಮೈಸೂರು ರೈಲ್ವೆ ಮಾರ್ಗಕ್ಕೆ ಆದ್ಯತೆ ಸಿಗುವ ನಿರೀಕ್ಷೆಯಲ್ಲಿ ಕೊಡಗು ಜಿಲ್ಲೆ
*ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಗೆ ಅನುಮೋದನೆ ಸಿಗುವ ನಿರೀಕ್ಷೆ
*ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಪ್ಯಾಕೇಜ್ ಸಿಗುವ ನಿರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ
*ಕೊಂಕಣ ರೈಲ್ವೆಯನ್ನ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಸಂಪೂರ್ಣ ವಿಲೀನ ಮಾಡುವುದು
* ಮಲ್ಪೆ ಬಂದರು ವಿಸ್ತರಣೆ, ಸ್ಮಾರ್ಟ್ ಸಿಟಿ ಘೋಷಣೆಯ ಎದುರು ನೋಡ್ತಿರೊ ಉಡುಪಿ
* ಬೆಂಗಳೂರು ಉಪನಗರ ರೈಲಿಗೆ ಹೆಚ್ಚಿನ ಅನುದಾನ
* ಬೆಂಗಳೂರಲ್ಲಿ ಸೆಮಿಕಂಡಕ್ಟರ್,ಇವಿ ಬಸ್‌ಗೆ ಅನುದಾನ ಸಿಗುವ ನಿರೀಕ್ಷೆ
*ಬಜೆಟ್‌ನಲ್ಲಿ ಉಪನಗರ ರೈಲಿಗೆ ಹೆಚ್ಚಿನ ಅನುದಾನದ ನಿರೀಕ್ಷೆ
*3ನೇ ಹಂತದ ಮೆಟ್ರೋ ಹಾಗೂ ಮೆಟ್ರೋ ಜಾಲ ಇನ್ನಷ್ಟು ವಿಸ್ತರಣೆಗೆ ಅನುದಾನದ ನಿರೀಕ್ಷೆ
*ಐಟಿಬಿಟಿ, ಎಐ, ಡೇಟಾಸೆಂಟರ್ ಸಂಶೋಧನೆಗೆ ಅನುದಾನದ ಹೆಚ್ಚಿನ ನಿರೀಕ್ಷೆ
*ಬೆಂಗಳೂರಿನಿಂದ ಅನೇಕ ರಾಜ್ಯಗಳಿಗೆ ಹೈಸ್ಪೀಡ್ ರೈಲ್ವೆ ಯೋಜನೆಗೆ ಘೋಷಣೆ ನಿರೀಕ್ಷೆ
* MSMEಗಳಿಗೆ ಸಿಗಲಿದ್ಯಾ ಹೆಚ್ಚಿನ ಆದ್ಯತೆ
*ESI- PFಗಳ ಮೇಲಿನ ಪೆನಾಲ್ಟಿಗೆ ಸಿಗುತ್ತಾ ವಿನಾಯಿತಿ
*PLI ಸ್ಕೀಂಗಳನ್ನ MSMEಗೂ ಪರಿಚಯಿಸಲಿದ್ಯಾ ಕೇಂದ್ರ ಸರ್ಕಾರ
*ಹೊಟೇಲ್‌ಗಳಲ್ಲಿರುವ 18% ಜಿಎಸ್ಟಿಯಲ್ಲಿ ವಿನಾಯಿತಿ ಸಿಗುತ್ತಾ..?
*ಬೇಡ್ತಿ-ವರದಾ ಯೋಜನೆಗೆ 1000ಸಾವಿರ ಕೋಟಿ ಘೋಷಣೆಯಾಗುವ ನಿರೀಕ್ಷೆ
*ಎತ್ತಿನ ಹೊಳೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಾಧ್ಯತೆ
*ಬೆಂಗಳೂರು ಹೈದರಾಬಾದ್ ಹೆದ್ದಾರಿಯನ್ನ ದಶಪಥ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಘೋಷಣೆ ನಿರೀಕ್ಷೆ
* ಅಂಜನಾದ್ರಿ ಅಯ್ಯೋದ್ಯೆ ನಡುವೆ ಹೊಸ ರೈಲು,ಅಂಜನಾದ್ರಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಹಂಪಿ ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್
*ಬಳ್ಳಾರಿಯಲ್ಲಿ ಜೀನ್ಸ್ ಜವಳಿ ಪಾರ್ಕ್ ನಿರೀಕ್ಷೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರೀಕ್ಷೆ ಹಾಗೂ ಚಿತ್ರದುರ್ಗದಲ್ಲಿ ಮದಕರಿ ಥೀಮ್ ಪಾರ್ಕ್ ಘೋಷಣೆ ಸೇರಿದಂತೆ ಕೇಂದ್ರದ ಬಜೆಟ್ ಮೇಲೆ ರಾಜ್ಯಕ್ಕೆ ಹಲವು ನಿರೀಕ್ಷೆಗಳಿವೆ.
ಇದನ್ನೂ ಓದಿ: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ದಾಖಲೆಯ 9ನೇ ಕೇಂದ್ರ ಬಜೆಟ್ ಮಂಡನೆ


















