ಲಕ್ನೋ: ಉತ್ತರ ಪ್ರದೇಶದ (Uttar Pradesh) ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರಕ್ಕೆ ಯತ್ನಿಸುತ್ತಿದ್ದ ಪ್ರಕರಣಗಳು ಬಯಲಿಗೆ ಬರುತ್ತಿದ್ದಂತೆ ಬೃಹತ್ ಜಾಲವನ್ನೇ ಪೊಲೀಸರು
ಹಣಕಾಸು ನೆರವು ಪಡೆದು ಐಸಿಸ್ ಮಾದರಿಯಲ್ಲಿ ಮತಾಂತರ (ISIS-Style’ Religious Conversion) ದಂಧೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಿವಿಧ ರಾಜ್ಯಗಳಲ್ಲಿ 10 ಜನರನ್ನು ಬಂಧಿಸಲಾಗಿದೆ.
ಗೋವಾದ ಆಯೇಷಾ (ಅಲಿಯಾಸ್ ಎಸ್.ಬಿ. ಕೃಷ್ಣ), ಕೋಲ್ಕತ್ತಾದ ಅಲಿ ಹಸನ್ (ಅಲಿಯಾಸ್ ಶೇಖರ್ ರಾಯ್) ಮತ್ತು ಒಸಾಮಾ, ಆಗ್ರಾದ ರೆಹಮಾನ್ ಖುರೇಷಿ, ಖಲಾಪರ್, ಮುಜಫರ್‌ನಗರದ ಅಬ್ಬು ತಾಲಿಬ್, ಡೆಹ್ರಾಡೂನ್‌ನ ಅಬುರ್ ರೆಹಮಾನ್, ದೆಹಲಿಯ ಮುಸ್ತಫಾ (ಅಲಿಯಾಸ್ ಮನೋಜ್), ಜೈಪುರದ ಮೊಹಮ್ಮದ್ ಅಲಿ ಮತ್ತು ಜುನೈದ್ ಖುರೇಷಿ ಬಂಧಿತರು ಎನ್ನಲಾಗಿದೆ.



















