ಬೆಳಗಾವಿ: ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡನನ್ನು ಬೆಳಗಾವಿಯ ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಆಜಂನಗರದ ನಿವಾಸಿ, ಆಯೂಬ್ ಪಾರ್ಥನಹಳ್ಳಿ ಬಂಧಿತ ಆರೋಪಿ.
ಕೇಂದ್ರ ಮಾಜಿ ಸಚಿವ ಬಿ. ಶಂಕರಾನಂದ ಪುತ್ರಿ ಡಾ. ಜಯಶ್ರೀ ಅವರು ಬೆಳಗಾವಿಯ ಸದಾಶಿವ ನಗರದಲ್ಲಿ ಐದು ಗುಂಟೆ ಜಾಗ ಹೊಂದಿದ್ದರು. ಆಸ್ತಿ ಕಬಳಿಕೆ.
ಸುನೀಲ ತಳವಾರ ಎಂಬಾತ ನಕಲಿ ದಾಖಲೆ ಸೃಷ್ಟಿಸಿ ಆ ಜಾಗವನ್ನು ತನ್ನ ಹೆಸರಿಗೆ ವರ್ಗಾಯಿಸಿ ಕೊಂಡಿದ್ದ. ಬಳಿಕ ಆ ಜಾಗಯನ್ನು ಆಯೂಬ್ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು.
ಡಾ. ಜಯಶ್ರೀ ಪುತ್ರಿ ರೋಹಿನಿ ಅವರು ತೆರಿಗೆ ಪಾವತಿಸಲು ಹೋದಾಗ ಆಸ್ತಿ ಬೇರೆಯವರಿಗೆ ವರ್ಗ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.
ಈ ಪ್ರಕರಣ ಸಂಬಂಧ ಸುನೀಲ ತಳವಾರ ಬಳಿಕ ಆಯೂಬ್ ಪಾರ್ಥನಹಳ್ಳಿ ಅವರನ್ನು ಬಂಧಿಸಲಾಗಿದೆ.



















