ಜನಗಣತಿ ಜೊತೆ ಜಾತಿ ಗಣತಿಗೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೋದಿ ಸರ್ಕಾರದ ಈ ನಡೆಯನ್ನು ಪಕ್ಷದ ಗೆಲುವು ಅಂತಾ ಬಿಂಬಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಈ ನಿಟ್ಟಿನಲ್ಲೇ ಇವತ್ತು ದೆಹಲಿಯಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಮಹತ್ವದ ಸಭೆ ಕರೆಯಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಂಜೆ 4 ಗಂಟೆಗೆ CWC ಸಮಾಲೋಚನೆ ನಡೆಸಲಿದೆ. 11 ವರ್ಷಗಳಿಂದ ಜಾತಿ ಗಣತಿ ವಿರೋಧಿಸುತ್ತಿದ್ದ ಕೇಂದ್ರ ಈಗ ಏಕಾಏಕಿ ನಿಲುವು ಬದಲಿಸಿದ್ದು, ಅದರ ಮುಂದಿನ ನಡೆ ಹೇಗಿರಲಿದೆ ಅನ್ನೋದರ ಬಗ್ಗೆ ಚರ್ಚಿಸಲಾಗುತ್ತಿದೆ.
ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಜಾತಿ ಗಣತಿಗೆ ಆದೇಶಿಸಲಾಗಿದೆ. ಆದ್ರೆ ಅದನ್ನು ಕಾರ್ಯರೂಪಕ್ಕೆ ಹೇಗೆ ತರಲಾಗುತ್ತೆ, ಎಂದಿನಿಂದ ಆರಂಭವಾಗಲಿದೆ ಅನ್ನೋದರ ಬಗ್ಗೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಲಿದ್ದಾರೆ.
ಇದರೊಟ್ಟಿಗೆ ರಾಹುಲ್ ಗಾಂಧಿ ಹೋರಾಟದ ಫಲವಾಗಿಯೇ ಜಾತಿ ಗಣತಿ ಫಲಪ್ರದವಾಗಿದ್ದು, ಅದರ ಶ್ರೇಯವನ್ನು ಮುಂಬರೋ ಚುಪನಾವಣೆಗಳಲ್ಲಿ ಬಳಸಿಕೊಳ್ಳೋ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ.



















