ಬೆಂಗಳೂರು : ಕಾಂಗ್ರೆಸ್ ಕೂಡ ಧರ್ಮಸ್ಥಳದ ಪರವಾಗಿದೆ. ನಾವೂ ಕೂಡ ಮಠ, ದೇವಸ್ಥಾನಗಳನ್ನು ಕಟ್ಟುತ್ತೇವೆ. “ಸಿಗಂದೂರು ದೇವಸ್ಥಾನವನ್ನು ಪಾಪಿಗಳು ಮುಜರಾಯಿಗೆ ಯಾಕೆ ಬರೆದರು? ಸಿಗಂದೂರು ದೇವಸ್ಥಾನ ವಿಚಾರವಿನ್ನು ಕೋರ್ಟ್ ನಲ್ಲಿದೆ” ಎಂದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಧರ್ಮಸ್ಥಳದ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಿಂದೂ ಪರ ನಾಯಕರು ಯಾಕೆ ಮಾತನಾಡುತ್ತಿಲ್ಲ? ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಸದನದಲ್ಲಿ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಶ್ರೀನಿವಾಸ ಪೂಜಾರಿಯವರೇನು ಪ್ರಭಾವಿ ನಾಯಕರಲ್ಲವೇ ? ಪತ್ರ ಬರೆಯುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಸ್ವತಃ ಹೆಗಡೆ ಅವರೇ ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ರಾಜಕೀಯವನ್ನು ಹೆಚ್ಚು ಮಾಡುವುದಕ್ಕೆ ಹೋಗಬೇಡಿ. 66ಸ್ಥಾನಕ್ಕೆ ಬಂದಿದ್ದೀರಿ. ನಿಮ್ಮ ಸ್ಥಾನಗಳ ಸಂಖ್ಯೆ ಇನ್ನೂ ಕಡಿಮೆ ಆಗುತ್ತದೆ ಎಂದು ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದಾರೆ.
ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬರಲಿದೆ. ಧರ್ಮಸ್ಥಳದ ಬಗ್ಗೆ ನಮಗೂ ಅಪಾರ ಗೌರವ ಇದೆ ಎಂದು ತಿಳಿಸಿದ್ದಾರೆ.

















