ಬೀದರ್ : ದೇಶದ ಇತಿಹಾಸದಲ್ಲೇ ಕಾಂಗ್ರೆಸ್ ಯಾರನ್ನು ದಲಿತ ಸಿಎಂ ಮಾಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಬೀದರ್‌ನಲ್ಲಿ ಸಚಿವ ಎ.ನಾರಾಯಣಸ್ವಾಮಿ ರಾಜ್ಯದಲ್ಲಿ ಕುರ್ಚಿ ಕದನದ ವೇಳೆ ದಲಿತ ಸಿಎಂ ಕೂಗು ವಿಚಾರ ಮಾತನಾಡಿ, ದೇಶದ ಇತಿಹಾಸದಲ್ಲೇ ಕಾಂಗ್ರೆಸ್ ಯಾರನ್ನು ದಲಿತ ಸಿಎಂ ಮಾಡಿಲ್ಲ. ಆಂಧ್ರ, ಬಿಹಾರ ರಾಜ್ಯದಲ್ಲಿ ಬಿಟ್ರೆ ದೇಶದ ಯಾವುದೇ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿಲ್ಲ, 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ದಲಿತ ಮತಗಳಿಂದಲೇ 65 ವರ್ಷಗಳಿಂದ ಅಧಿಕಾರಕ್ಕೆ ಬರುತ್ತಿದ್ದಾರೆ. ನಾವಿಲ್ಲಾ ಅಂದ್ರೆ ಈ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಇಲ್ಲ ಎಂದಿದ್ದಾರೆ.
ಈ ರಾಜ್ಯದಲ್ಲಿ ದಲಿತ ಸಿಎಂ ಕೂಗು ಎಂದಾಗ ಮಲ್ಲಿಕಾರ್ಜುನ್ ಖರ್ಗೆ ಏನಂದ್ರು.. ಸೋನಿಯಾ, ರಾಹುಲ್ ತೀರ್ಮಾನ ಮಾಡುತ್ತಾರೆ ಎಂದ್ರು.. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಖರ್ಗೆ ಈಗೇ ಹೇಳಿ ಹೋದ್ರು, ಒಳ ಮೀಸಲಾತಿ ಸಿಗದಿದ್ರೆ ನಮ್ಮ ಯಾವುದೇ ಪಕ್ಷದ ಸಚಿವರ ಪಕ್ಷದಲ್ಲಿ ಇರಬೇಕೋ ಬೇಡ್ವಾ ಅವರಿಗೆ ಬಿಟ್ಟಿದ್ದು, ರಾಜೀನಾಮೆ ಕೊಟ್ಟು ಹೊರಗಡೆ ಬರಬೇಕಾ ಒಂದು ತಿಂಗಳಲ್ಲಿ ನಾವು ತೀರ್ಮಾನ ಮಾಡ್ತೇವೆ. ಸಮಾಜಕ್ಕೆ ಅನ್ಯಾಯವಾದ್ರೆ ಎಲ್ಲ ಸಚಿವರ ರಾಜೀನಾಮೆ ಕೊಡಿಸುವ ಕೆಲಸ ಮಾಡುತ್ತೇವೆ. ಒಳ ಮೀಸಲಾತಿ ವಿಚಾರದಲ್ಲಿ ಎಲ್ಲರೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಾರ್ ಮೇಲೆ ಗುಂಡಿನ ದಾಳಿ | 9 ಜನ ಸಾವು, 10 ಮಂದಿಗೆ ಗಾಯ



















