ಬೆಂಗಳೂರು: ಕಾಂಗ್ರೆಸ್ ಪಕ್ಷ ವಿವಿಧ ರಾಜ್ಯಗಳ ಉಸ್ತುವಾರಿ ನೇಮಕ ಮಾಡಿದೆ.
ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೂ ಹೊಸ ಜವಾಬ್ದಾರಿ ನೀಡಿದ್ದು, ಹರಿಯಾಣ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇನ್ನುಳಿದಂತೆ ಸೈಯ್ಯದ್ ನಾಸಿರ್ ಹುಸೇನ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ.
ಭೂಪೇಶ್ ಬಘೇಲ್- ಪಂಜಾಬ್ ಉಸ್ತುವಾರಿಯಾಗಿ ನೇಮಕ
ರಜನಿ ಪಾಟೀಲ್- ಹಿಮಾಚಲ ಪ್ರದೇಶ, ಚಂಢಿಗಡ ಉಸ್ತುವಾರಿಯಾಗಿ ನೇಮಕ
ಹರೀಶ್ ಚೌಧರಿ- ಮಧ್ಯಪ್ರದೇಶ ಉಸ್ತುವಾರಿಯಾಗಿ ನೇಮಕ
ಗಿರೀಶ್- ತಮಿಳುನಾಡು ಮತ್ತು ಪುದುಚೇರಿ ಉಸ್ತುವಾರಿಯಾಗಿ ನೇಮಕ
ಅಜಯ್ ಕುಮಾರ್ ಲಲ್ಲು -ಒರಿಸ್ಸಾ ಉಸ್ತುವಾರಿಯಾಗಿ ನೇಮಕ
ಕೆ.ರಾಜು- ಜಾರ್ಕಾಂಡ್ ಉಸ್ತುವಾರಿ,
ಮೀನಾಕ್ಷಿ ನಟರಾಜನ್- ತೆಲಂಗಾಣ
ಸಪ್ತಗಿರಿ ಶಂಕರ್- ಮಣಿಪುರ,ತ್ರಿಪುರ,ಸಿಕ್ಕಿಂ,ನಾಗಾಲ್ಯಾಂಡ್ ಉಸ್ತುವಾರಿ
ಕೃಷ್ಣ ಅಲ್ಲವರು- ಬಿಹಾರ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ.