ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ಲೋಕದ ಮಾಜಿ ಆಟಗಾರರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಟೀಂ ಇಂಡಿಯಾಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶುಭ ಕೋರಿದ್ದಾರೆ. ‘ಹುಟ್ಟುಹಬ್ಬಕ್ಕೆ ಅಮೂಲ್ಯವಾದ ಉಡುಗೊರೆ ನೀಡಿದ್ದಕ್ಕೆ’ ಧನ್ಯವಾದಗಳು ಎಂದು ಧೋನಿ ಚಾಂಪಿಯನ್ ತಂಡದ ಆಟಗಾರರನ್ನು ಅಭಿನಂದಿಸಿದ್ದಾರೆ.
ಭಾರತ ತಂಡದ ಗೆಲುವನ್ನು ಸಂಭ್ರಮಿಸಿದ ಧೋನಿ ಇನ್ ಸ್ಟ್ರಾದಲ್ಲಿ ಪೋಸ್ಟ್ ಹಾಕಿದ್ದಾರೆ. ವರ್ಲ್ಡ್ ಕಪ್ ಚಾಂಪಿಯನ್ಸ್ 2024. ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಎಂದಿನಂತೆ ತಾಳ್ಮೆ ಹಾಗೂ ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಿ ವಿಶ್ವಕಪ್ ನ್ನು ತವರಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಹುಟ್ಟುಹಬ್ಬದ ಉಡುಗೊರೆ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಸಮವಸ್ತ್ರದಲ್ಲಿ ಲಗತ್ತಿಸಲಾಗದ ಪ್ರತಿಯೊಂದು ನಕ್ಷತ್ರವು, ನಮ್ಮ ದೇಶದ ಮಕ್ಕಳು. ಕಂಡ ಕನಸು ಮುಟ್ಟಲು ಹುರಿದುಂಬಿಸಲಿದೆ. ಭಾರತಕ್ಕೆ ನಾಲ್ಕನೇ ನಕ್ಷತ್ರ (ವಿಶ್ವಕಪ್) ದೊರಕಿತು ಎಂದು ಪೋಸ್ಟ್ ಮಾಡಿದ್ದಾರೆ.