ಬೆಂಗಳೂರು : ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆಯಾಗಲಿದೆ. ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಬೇಕು, ಅಜ್ಜಿಯ ಮನೆಗೆ ಕರೆದುಕೊಂಡು ಹೋಗಬೇಕು. ಕೆಲಸದ ಒತ್ತಡ ಮರೆಯಲು, ಮನಸ್ಸಿಗೆ ಮುದ ನೀಡುವ ಸ್ಥಳಗಳಿಗೆ ಭೇಟಿ ಕೊಡಬೇಕು ಎಂದು ಪ್ಲಾನ್ ಮಾಡುವವರ ಸಂಖ್ಯೆ ದೊಡ್ಡದಿದೆ. ಇಂತಹ ಪ್ರವಾಸಿಗರಿಗೆ, ರೈಲು ಪ್ರಯಾಣಿಕರಿಗೆ ಈಗ ಸಿಹಿ ಸುದ್ದಿ ದೊರೆತಿದೆ. ರೈಲು ಟಿಕೆಟ್ ಬುಕ್ಕಿಂಗ್ ಮೇಲೆ ಈಗ ಶೇ.1ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ.
ಹೌದು, ರೈಲು ಟಿಕೆಟ್ ಬುಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ಐಆರ್ ಸಿಟಿಸಿ ಅನುಮೋದನೆ ಇರುವ ConfirmTkt ಸಂಸ್ಥೆಯು, ತನ್ನ ಆ್ಯಪ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವವರಿಗೆ ಶೇ.1ರಷ್ಟು ಕ್ಯಾಶ್ ಬ್ಯಾಕ್ (Cashback) ನೀಡುವುದಾಗಿ ಘೋಷಿಸಿದೆ. ಬೇಸಿಗೆಯ ಪ್ರವಾಸಕ್ಕಾಗಿಯೇ ಕಂಪನಿಯು ಕ್ಯಾಶ್ ಬ್ಯಾಕ್ ಘೋಷಣೆ ಮಾಡಿದೆ.
ಅಂದರೆ, ನೀವು ConfirmTkt ಆ್ಯಪ್ ಬಳಸಿ ಬುಕ್ ಮಾಡುವ ಪ್ರತಿಯೊಂದು ರೈಲು ಟಿಕೆಟ್ ಮೇಲೂ ನಿಮಗೆ 1% ಕ್ಯಾಶ್ ಬ್ಯಾಕ್ ದೊರೆಯಲಿದೆ.ಉದಾಹರಣೆಗೆ: ಬೆಂಗಳೂರಿನಿಂದ ಕಲಬುರಗಿಗೆ ಸ್ಲೀಪರ್ ಕ್ಲಾಸ್ ಟಿಕೆಟ್ ದರ 400 ರೂಪಾಯಿ ಎಂದು ಇಟ್ಟುಕೊಳ್ಳೋಣ. ನೀವು ಈ ಟಿಕೆಟ್ ಅನ್ನು ConfirmTkt ಆ್ಯಪ್ ಮೂಲಕ ಬುಕ್ ಮಾಡಿದರೆ, ನಿಮಗೆ 4 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.
ಈ ಕ್ಯಾಶ್ ಬ್ಯಾಕ್ ಕೊಡುಗೆಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ನೀವು ಎಷ್ಟು ರೂಪಾಯಿಗೆ ಟಿಕೆಟ್ ಬುಕ್ ಮಾಡಿದರೂ ಸಹ ನಿಮಗೆ 1% ಕ್ಯಾಶ್ಬ್ಯಾಕ್ ಸಿಗಲಿದೆ. ಅಲ್ಲದೆ, ಈ ಕ್ಯಾಶ್ ಬ್ಯಾಕ್ ಪಡೆಯಲು ಯಾವುದೇ ಪ್ರೋಮೋ ಕೋಡ್ ಅಗತ್ಯವಿಲ್ಲ. ನೀವು ಎಂದಿನಂತೆ ಟಿಕೆಟ್ ಬುಕ್ ಮಾಡಿದರೆ ಸಾಕು, 1% ಕ್ಯಾಶ್ ಬ್ಯಾಕ್ ಮೊತ್ತವು ನಿಮ್ಮ ConfirmTkt ಆ್ಯಪ್ ನ ವ್ಯಾಲೆಟ್ ಗೆ ಜಮೆಯಾಗುತ್ತದೆ.
ಇದನ್ನೂ ಓದಿ : ವಿಶ್ವವಿಖ್ಯಾತ ‘ಬೆಂಗಳೂರು ಕರಗ’ ಉತ್ಸವಕ್ಕೆ ಮುಹೂರ್ತ ಫಿಕ್ಸ್


















