ಯಾದಗಿರಿ : ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತ ಸಮೀಪ ರವಿವಾರ ರಾತ್ರಿ ಸಿಡಿಲಿಗೆ ಹೊತ್ತಿ ತೆಂಗಿನ ಮರಗಳು ಧಗಧಗನೆ ಉರಿದು ಹೋಗಿರುವ ಘಟನೆ ಸಂಭವಿಸಿದೆ.
ಸುಗ್ಗಣ್ಣ ಸಾಹು ಮನೆ ಪಕ್ಕದಲ್ಲಿ ಬಿದ್ದ ಸಿಡಿಲು ಮನೆಯ ತೆಂಗಿನ ಮರಗಳಿಗೆ ಹಾರಿಸಿ ಕೆನ್ನಾಲಿಗೆ ತಲುಪಿದ್ದು, ಮರಗಳು ಸಂಪೂರ್ಣವಾಗಿ ಕರಕಲಾಗಿದೆ. ಸಿಡಿಲು ಬಿದ್ದಾಗ ಮನೆಯವರು ಹೊರಗೆ ಇದ್ದರು, ಅವರ ಪ್ರಾಣಕ್ಕೆ ತುರ್ತು ಅಪಾಯದ ಸಂಕೇತ ಉಂಟಾಗಿದೆ ಎಂದು ತಿಳಿದುಬಂದಿದೆ.
ಘಟನೆಯು ಭಾರೀ ಸಿಡಿಲಿನ ಅಬ್ಬರದ ವೇಳೆ ನಡೆದಿದೆ. ಹುಣಸಗಿ ಪಟ್ಟಣದ ಜನರು ಸಿಡಿಲಿನ ಆರ್ಭಟದಿಂದ ಬೆಚ್ಚಿಬಿದ್ದಿದ್ದಾರೆ. ಈ ದುರಂತದಲ್ಲಿ ಮನೆಯ ಹತ್ತಿರದ ತೆಂಗಿನ ಮರಗಳು ಸಂಪೂರ್ಣವಾಗಿ ಉರಿದು ಭಸ್ಮವಾಯ್ತು. ಸ್ಥಳಕ್ಕೆ ಅಗ್ನಿಶಾಮಕ ಮತ್ತು ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಪ್ರತಿಷ್ಟಿತ ರಿಯಲ್ ಎಸ್ಟೇಟ್ ಕಂಪನಿ ಮೇಲೆ ಇಡಿ ರೇಡ್



















