ಬೆಳಗಾವಿ: ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಮುಖಾಮುಖಿಯಾಗಿದ್ದು, ಈ ವೇಳೆ ಪರಸ್ಪರ ನಾಯಕರು ಕುಶಲೋಪರಿ ವಿಚಾರಿಸಿದರು.
ಬೆಳಗಾವಿ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಈ ವೇಳೆ ಮಾಜಿ ಶಾಸಕ ಫಿರೋಜ್ ಶೇಠ್ ಅವರು ರಮೇಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಗೆ ಕರೆಯಿಸಿಕೊಳ್ಳಿ ಎಂದು ಸಿಎಂಗೆ ಮನವಿ ಮಾಡಿದರು. ಆದರೆ, ಈ ವೇಳೆ ಮರು ಮಾತನಾಡದೆ ಸಿಎಂ ಸಿದ್ದರಾಮಯ್ಯ ಮುಗುಳ್ನಗೆ ಬೀರಿದ್ದಾರೆ.
ನಾನೇ ಇವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿ ಅಲ್ಲಿಂದ ಹೋಗಿದ್ದಾರೆ. ಈ ಮಾತಿಗೆ ಅಲ್ಲಿದ್ದವರು ನಕ್ಕಿದ್ದಾರೆ. ಈ ವೇಳೆ ಏ ಸಾಹುಕಾರ್ ಎಂದು ರಮೇಶ್ ಜಾರಕಿಹೊಳಿಯನ್ನು ಜಮೀರ್ ಅಹ್ಮದಖಾನ್ ಅಪ್ಪಿಕೊಂಡಿದ್ದಾರೆ.