ಶಿವಮೊಗ್ಗ: ಮೈಸೂರು ದಸರಾ ಉತ್ಸವದಲ್ಲೂ ಸಿಎಂ ಸಿದ್ದರಾಮಯ್ಯನವರು ಹುಚ್ಚುತನ ತೋರಿದ್ದಾರೆಂದು ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ವಿಚಾರದ ಬಗ್ಗೆ ಕಳೆದ 1 ತಿಂಗಳಿನಿಂದ ಸಾಕಷ್ಟು ಚರ್ಚೆಗಳು ಆಗಿದೆ. ಸುಪ್ರೀಕೋರ್ಟ್‌ನಲ್ಲೂ ಕೂಡ ಈ ಬಗ್ಗೆ ಅರ್ಜಿ ತಿರಸ್ಕೃತಗೊಂಡಿತ್ತು. ಹೈಕೋರ್ಟ್‌ನಲ್ಲಿ ಏನಾಗಿದೆ, ಸುಪ್ರೀಂಕೋರ್ಟ್‌ನಲ್ಲಿ ಏನಾಗಿದೆ ಎಂಬುದು ಮುಖ್ಯವಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ದಸರಾ ಉತ್ಸವದಲ್ಲೂ ಸಹ ಈ ರೀತಿ ಹುಚ್ಚಾಟ ಆಡಬೇಕೆಂದು ಅನಿಸಿದೆಯಲ್ಲ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದ ವಿಚಾರದಲ್ಲೂ ರಾಜ್ಯ ಸರ್ಕಾರ ಹುಚ್ಚುತನ ತೋರಿದೆ. ಗಣೇಶ ಹಬ್ಬವನ್ನೂ ರಾಜ್ಯದಲ್ಲಿ ಸುಲಲೀತವಾಗಿ ನಡೆಯಲು ಇವರು ಬಿಡಲಿಲ್ಲ. ಇಡೀ ದೇಶದಲ್ಲಿ ಎಲ್ಲೂ ಕೂಡ ಈ ರೀತಿಯ ಗೊಂದಲಗಳು ಆಗುತ್ತಿಲ್ಲ ಕರ್ನಾಟಕದಲ್ಲಿ ಮಾತ್ರ ಈ ರೀತಿ ಗೊಂದಲ ಆಗುತ್ತಿದೆ. ಹಿಂದೂಗಳ ವಿಚಾರದಲ್ಲಿ, ಹಿಂದೂಗಳ ಹಬ್ಬ ಹರಿದಿನ ಆಚರಣೆಗಳ ವಿಚಾರದಲ್ಲಿ, ನಮ್ಮ ಸಂಸ್ಕೃತಿ ನಮ್ಮ ಪರಂಪರೆ ವಿಚಾರದಲ್ಲಿ ದೇಶದ ಯಾವುದೇ ರಾಜ್ಯಗಳಲ್ಲೂ ಈ ರೀತಿಯ ಗೊಂದಲಗಳು ಇಲ್ಲ, ಕರ್ನಾಟಕದಲ್ಲಿ ಈ ರೀತಿ ಗೊಂದಲ ಇರೋದಕ್ಕೆ ಸಿಎಂ ಸಿದ್ದರಾಮಯ್ಯನವರೇ ಕಾರಣ. ಎಂದಿದ್ದಾರೆ.
ದಸರಾವನ್ನು ಯಾರು ಬೇಕಾದರೂ ಉದ್ಘಾಟನೆ ಮಾಡಲಿ, ಆದರೆ ಈ ಸರ್ಕಾರ, ಮುಖ್ಯಮಂತ್ರಿಗಳ ಮನಸ್ಥಿತಿ ಏನೆಂಬುದನ್ನು ರಾಜ್ಯದ ಜನರ ಅರಿತುಕೊಂಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.