ಬೆಂಗಳೂರು: ಭಾರತದ ಗಾನ ಕೋಗಿಲೆ ಸರೋಜಿನಿ ನಾಯ್ಡು ಅವರಿಗೆ ಸಿಎಂ ಸಿದ್ದರಾಮಯ್ಯ ಗೌರವ ನಮನ ಸಲ್ಲಿಸಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟ, ಮಹಿಳೆಯರ ಸಬಲೀಕರಣ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸರೋಜಿನಿ ನಾಯ್ಡು ಅವರ ಜೀವನ ರಾಷ್ಟ್ರದ ಮಹಿಳಾ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ.
ಭಾರತದ ಕೋಗಿಲೆಯೆಂದೇ ಖ್ಯಾತರಾದ ಸರೋಜಿನಿ ನಾಯ್ಡು ಅವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನಮಿಸುತ್ತಾ, ನಾಡಿನ ಮಹಿಳೆಯರಿಗೆ ರಾಷ್ಟ್ರೀಯ ಮಹಿಳಾ ದಿನದ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.