ಮಾತು ಮನೆ ಕೆಡಿಸಿತು ಅನ್ನೋ ಹಾಗೆ ಮನಿ ಕೊಟ್ರೆ ಮನೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಹಾಳುಗೆಡುವ್ತಾ ಅನ್ನೋ ಹಾಗಾಗಿದೆ.
ಆಳಂದ ಶಾಸಕ ಬಿ ಆರ್ ಪಾಟೀಲ್ ಹೊತ್ತಿಸಿದ ಆಡಿಯೋ ಬೆಂಕಿ ಇವತ್ತು ನಿಧಾನಕ್ಕೆ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಈ ಬೆಂಕಿಯನ್ನು ನಂದಿಸುವ ಹೊಣೆ ಹೊತ್ತಿರುವ ಸಿಎಂ ಸಿದ್ದರಾಮಯ್ಯ ದಿಢೀರ್ ಅಲರ್ಟ್ ಆಗಿದ್ದಾರೆ.
ಬುಧವಾರ ದೆಹಲಿಯಿಂದ ಬರ್ತಿದ್ದಂತೆ ಬಿಆರ್ ಪಾಟೀಲ್ ಹಾಗೂ ರಾಜು ಕಾಗೆಯನ್ನು ಮನೆಗೆ ಕರೆಸಿಕೊಂಡು ಬುದ್ದಿ ಮಾತು ಹೇಳಿ ಕಳುಹಿಸಿದ್ದರು. ಇನ್ನು ನಿನ್ನೆ ಕೂಡಾ ಈ ಕಿವಿ ಹಿಂಡುವ ರಾಜಕೀಯ ಮುಂದುವರಿದಿತ್ತು.
ಅತೃಪ್ತಿಯ ಅಪಸ್ವರ ಎತ್ತಿರುವ ಬೇಳೂರು ಗೋಪಾಲ ಕೃಷ್ಣ, ಯುಬಿ ಬಣಕಾರ್,ಎಂಪಿ ನರೇಂದ್ರ ಸ್ವಾಮಿ, ರಾಘವೇಂದ್ರ ಹಿಟ್ನಾಳ್ ರೊಟ್ಟಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ವಿನಾಕಾರಣ ಸರ್ಕಾರಕ್ಕೆ ಮುಜುಗರ ತರುವಂಥಾ ಮಾತುಗಳನ್ನು ನಿಲ್ಲಿಸುವಂತೆ ಸಿಎಂ ಖಡಕ್ ಸಂದೇಶ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಕೆಲ ತಿಂಗಳಲ್ಲಿ ಇತ್ಯರ್ಥಗೊಳಿಸಿ, ಸಮಸ್ಯೆ ಬಗೆಹರಿಸುವ ವಾಗ್ದಾನವನ್ನೂ ಸಿಎಂ ಮಾಡಿದ್ದಾರೆ. ಈ ನಾಯಕರನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಚರ್ಚಿಸಿರುವ ಸಿದ್ದರಾಮಯ್ಯ ಅನಾಹುತ ತಪ್ಪಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.