ನವದೆಹಲಿ : ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಹೈಕಮಾಂಡ್ ವರಿಷ್ಠ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇಬ್ಬರು ನಾಯಕರು ಜಂಟಿಯಾಗಿ ರಾಹುಲ್ ಗಾಂಧಿ ಭೇಟಿಯಾಗಿ ನಿಗಮಮಂಡಳಿ, ಎಂಎಲ್ ಸಿ ಸ್ಥಾನಗಳ ಪಟ್ಟಿ, ಆಗಸ್ಟ್ 5 ರಂದು ನಡೆಯುವ ಮತಗಳ್ಳತನ ಜನ ವಿರೋಧಿ ಸಮಾವೇಶ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ನಿಗಮಮಂಡಳಿ ಕುರಿತಾಗಿ ಕೆಲವು ಜಟಾಪಟಿ ಇದ್ದು ಅದನ್ನು ಪರಿಹರಿಸುವ ಬಗ್ಗೆ, ಸಚಿವ ಸಂಪುಟ ಸರ್ಜರಿ ಬಗ್ಗೆ ಮತ್ತು ಯಾವ ಸಚಿವರಿಗೆ ಕೋಕ್ ನೀಡಬೇಕು, ಯಾರನ್ನು ಸಂಪುಟಕ್ಕೆ ತೆಗದುಕೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಬಿಹಾರ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ, ಎಲ್ಲಾ ಪ್ರಕ್ರಿಯೆಗಳಿಗೆ ಬಿಹಾರ ಚುನಾವಣೆಯ ಬಳಿಕವೇ ಅಂತಿಮ ಮುದ್ರೆ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸಿಎಂ, ಡಿಸಿಎಂ ಜಂಟಿ ಭೇಟಿಯ ಬಳಿಕ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಭೇಟಿ ಮಾಡಲಿದ್ದಾರೆ. ಪ್ರತ್ಯೇಕ ಭೇಟಿ ವೇಳೆ ಪವರ್ ಶೇರಿಂಗ್ ಕುರಿತು ಚರ್ಚೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.