ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಯಲ್ಲಿ ಪ್ರಕೃತಿ ಸೌಂದರ್ಯದ ಅದ್ಭುತ ದೃಶ್ಯ ಕಂಡು ಬಂದಿದೆ. ಎರಡು ಹಸಿರು ಗುಡ್ಡಗಳ ನಡುವೆ ಹಾಲಿನ ನೊರೆಯಂತೆ ಹರಡಿಕೊಂಡಿರುವ ಮೋಡಗಳ ಸರಪಳಿ ಪ್ರವಾಸಿಗರನ್ನು ಮನಸೆಳೆಯುತ್ತಿದೆ.
ಸುಮಾರು ಸಮುದ್ರಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಕೆಮ್ಮಣ್ಣುಗುಂಡಿ, ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಸೇರಿದ್ದು, ತನ್ನ ಶಾಂತ ವಾತಾವರಣ ಮತ್ತು ಹಸಿರಿನ ನಿಸರ್ಗದೊಂದಿಗೆ ಪ್ರಸಿದ್ಧವಾಗಿದೆ. ಈ ಬಾರಿ ಗುಡ್ಡಗಳ ಮಧ್ಯೆ ತೇಲಾಡುವ ಮೋಡಗಳು ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ಈ ಆಕರ್ಷಕ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಕೃತಿ ಪ್ರೇಮಿಗಳಿಗೆ ಕೆಮ್ಮಣ್ಣುಗುಂಡಿ ಮತ್ತೊಮ್ಮೆ ಸ್ವರ್ಗದಂತಾಗಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ಈ ಅಪೂರ್ವ ಕ್ಷಣವನ್ನು ಆನಂದಿಸಿದ್ದಾರೆ.
ಇದನ್ನೂ ಓದಿ : ಕಾಫಿನಾಡಲ್ಲಿ ಸಿಎಂ ಪತ್ನಿ ಟೆಂಪಲ್ ರನ್



















