ಕಂಟ್ರೋಲ್ ಕಳೆದುಕೊಂಡ ಪರಿಣಾಮ ಯದ್ವಾ-ತದ್ವಾ ನುಗ್ಗಿದ ಕಾರೊಂದು ಮನೆ ಮೇಲ್ಚಾವಣಿ ಏರಿ ಜನರಿರುವ ಘಟನೆ ನಡೆದಿದೆ.
ಫುಲ್ ಎಣ್ಣೆ ಹೊಡೆದಿದ್ದ ಚಾಲಕ, ಆಲ್ಟ್ರೋಜ್ ಕಾರಿನ್ನ ರಸ್ತೆಯಲ್ಲಿ ಡ್ರೈವ್ ಮಾಡ್ಕೊಂಡು ಬಂದಿದ್ದ. ಈ ವೇಳೆ ಸ್ಪೀಡ್ ಹೆಚ್ಚಾಗಿ ಕಂಟ್ರೋಲ್ ಕಳೆದುಕೊಂಡ ಕಾರು ರಸ್ತೆ ಪಕ್ಕ ಇದ್ದ ಮನೆ ಛಾವಣೆ ಏರಿ ಸಿಟ್ಟಿಂಗ್ ಹಾಕಿತ್ತು. ಅದು ಹೇಗಿತ್ತೆಂದ್ರೆ ಬೆಂಕಿ ಪೊಟ್ಟಣವನ್ನ ಮನೆ ಚಾವಣಿ ಮೇಲೆ ಇಟ್ಟಂತೆ ಭಾಸವಾಗ್ತಿತ್ತು. ಇನ್ನು ಅಪಘಾತದ ಫನ್ನಿ ಸೀನ್ ಕಂಡು ಜನರು ಆಶ್ಚರ್ಯಚಕಿತರಾಗಿದ್ರು.
ಪ್ಲ್ಯಾನ್ ಮಾಡಿದ್ರೂ ಕೂಡ ಈ ಥರ ಕಾರ್ ಕೂರಿಸೋಕೆ ಆಗಲ್ಲ ಅಂತಾ ತಮ್ಮ-ತಮ್ಮಲ್ಲೇ ಮಾತನಾಡಿಕೊಳ್ತಿದ್ರು. ಅಪಘಾತದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್ ಮೂಲಕ ಕಾರನ್ನ ಕೆಳಗೆ ಇಳಿಸಿದ್ದಾರೆ. ಅಂದಹಾಗೆ ತೆಲಂಗಾಣದ ಶಂಬಿಪುರ್ ವ್ಯಾಪ್ತಿಯ ಮಲ್ಲಂಪೇಟ್-ರಸ್ತೆನಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ.
car
h