ಬೆಂಗಳೂರು: ರಾಜ್ಯದ ಕ್ಯಾನ್ಸರ್ ಆಸ್ಪತ್ರೆ ವಿರುದ್ಧ ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ HCG ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ನಾವು ಎಲ್ಲಾ ಗೈಡ್ಲೈನ್ಸ್ ಗಳನ್ನೂ ಕಡ್ಡಾಯವಾಗಿ ಫಾಲೋ ಮಾಡುತ್ತಿದ್ದೇವೆ. ಡಿಜಿಸಿಐ, ಐಸಿಎಂಆರ್‌ನ ನಿಬಂಧನೆಗಳನ್ನು ಅನುಸರಿಸುತ್ತಿದ್ದೇವೆ. ನಮ್ಮಲ್ಲಿ ಹಲವು ಮಹತ್ವದ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಎಥಿಕ್ಸ್ ಕಮಿಟಿ ಅನುಮತಿಸಿರುವ ಪ್ರಯೋಗಗಳೇ ನಡೆಯುತ್ತಿವೆ. ಎಲ್ಲದರಲ್ಲೂ ಪಾರದರ್ಶಕತೆ, ರೋಗಿಯ ಸುರಕ್ಷತೆ ಬಗ್ಗೆಯೂ ಗಮನ ಕೊಟ್ಟಿದ್ದೇವೆ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.