ಬೆಂಗಳೂರು: ಸರ್ಕಾರಿ ಉದ್ಯೋಗ ಹಿಡಿಯಬೇಕು, ಕೈತುಂಬ ಸಂಬಳ ಪಡೆಯಬೇಕು, ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ತುಂಬ ಜನರ ಕನಸಾಗಿರುತ್ತದೆ. ಈ ಕನಸು ನನಸು ಮಾಡಿಕೊಳ್ಳಲು ಸುವರ್ಣಾವಕಾಶವೊಂದು ಇಲ್ಲಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF Recruitment 2025) 1,161 ಕಾನ್ ಸ್ಟೆಬಲ್ / ಟ್ರೇಡ್ಸ್ ಮನ್ ಹುದ್ದೆಗಳು ಖಾಲಿ ಇದ್ದು, ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಬಹುದಾಗಿದೆ.
ಯಾರಿಗೆ ಎಷ್ಟು ಹುದ್ದೆ ಮೀಸಲು?
- ಪುರುಷರಿಗೆ 945
- ಮಹಿಳೆಯರಿಗೆ 103
- ಮಾಜಿ ಸೈನಿಕರಿಗೆ 113
- ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ 03/04/2025
ಅರ್ಜಿ ಸಲ್ಲಿಕೆಗೆ ಹೇಗೆ?
- ರಿಜಿಸ್ಟ್ರೇಷನ್ ಗೆ https://cisfrectt.cisf.gov.in/recruitment_latest/new_registration.php ಲಿಂಕ್ ಓಪನ್ ಮಾಡಿ
- ವೆಬ್ ಪೇಜ್ ಓಪನ್ ಆದ ಬಳಿಕ ಅಗತ್ಯ ಮಾಹಿತಿ ಒದಗಿಸಿ ನೋಂದಣಿ ಮಾಡಿಕೊಳ್ಳಿ
- ನಂತರ ಲಾಗ್ ಇನ್ ಆಗುವ ಮೂಲಕ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ
ವಯೋಮಿತಿ ಎಷ್ಟಿದೆ?
ದಿನಾಂಕ 01-08-2025ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ಕೆಟಗರಿ – ನಾನ್ ಕ್ರಿಮಿಲೇಯರ್ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ.
ನೇಮಕಾತಿ ಪ್ರಕ್ರಿಯೆ
ಅರ್ಜಿ ಸಲ್ಲಿಸಿದವರಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆ (ಪಿಇಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಸ್ ಟಿ), ಟ್ರೇಡ್ ಟೆಸ್ಟ್, ಮೂಲ ದಾಖಲೆಗಳ ಪರಿಶೀಲನೆ, ಒಎಂಆರ್ ಆಧಾರಿತ ಕಂಪ್ಯೂಟರ್ ಪರೀಕ್ಷೆ, ಮೆಡಿಕಲ್ ಟೆಸ್ಟ್ ನಡೆಸುವ ಮೂಲಕ ಮೆರಿಟ್ ಆಧಾರದಲ್ಲಿ, ಮೀಸಲಾತಿಗೆ ಅನುಗುಣವಾಗಿ ಕಾನ್ಸ್ ಟೆಬಲ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.