ಬೆಂಗಳೂರು: ಬೀದರ್, ಹೈದರಾಬಾದ್, ಮಂಗಳೂರಿನಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಹಣ ದರೋಡೆ ಮಾಡಿರುವ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಸಿಲಿಕಾನ್ ಸಿಟಿಯಲ್ಲಿ ಅಲರ್ಟ್ ಆಗಿರುವಂತೆ ಪೊಲೀಸ್ ಕಮಿಷನರ್ ಬಿ. ದಯಾನಂದ್(B. Dayanand) ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಬೀದರ್ ಹಾಗೂ ಮಂಗಳೂರಿನಲ್ಲಿ ಭಾರೀ ದರೋಡೆ ನಡೆದಿವೆ. ಖದೀಮರು ಕೋಟ್ಯಾಂತರ ರೂ. ದೋಚಿದ್ದಾರೆ. ಹೀಗಾಗಿ ನಗರದ ನಗರದ ಪ್ರತಿ ಎಟಿಎಂ, ಬ್ಯಾಂಕ್ ಗಳ ಬಳಿ ಅಲರ್ಟ್ ಆಗಿರಬೇಕೆಂದು ಬ್ಯಾಂಕ್, ಎಟಿಎಂ ಸೆಕ್ಯುರಿಟಿ ಏಜೆನ್ಸಿಗಳಿಗೆ ಸೂಚನೆ ನೀಡಿದ್ದಾರೆ.
ಎಷ್ಟು ಜನ ಸೆಕ್ಯುರಿಟಿ ಇರುತ್ತಾರೆ? ನೈಟ್ ಶಿಫ್ಟ್ ಎಷ್ಟು? ಡೇ ಶಿಫ್ಟ್ ಎಷ್ಟು ಜನ? ಬ್ಯಾಂಕ್, ಎಟಿಎಂಗಳ ಬಳಿ ಸಿಸಿಟಿವಿ ಕ್ಯಾಮರಾ ಸರಿ ಇದೆಯಾ? ಎಂಬೆಲ್ಲ ಕುರಿತು ಮಾಹಿತಿ ಪಡೆಯಲು ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ.
ಹೊಯ್ಸಳ ಸಿಬ್ಬಂದಿಯಿಂದ ಬ್ಯಾಂಕ್ ಎಟಿಎಂ ಬಳಿ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯ ನಂತರ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಎಟಿಎಂಗಳಲ್ಲಿ ಸೆಕ್ಯೂರಿಟಿ ಇರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಖಚಿತ ಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಹಣ ತುಂಬಲು ಹೋಗುವ ಏಜೆಸ್ಸಿ ವಾಹನಕ್ಕೆ ಭದ್ರತೆ ಹೆಚ್ಚಿಸಲು ಸೂಚನೆ ನೀಡಿದ್ದಾರೆ.
ಯಾವುದೇ ಅಪರಿಚಿತ ವ್ಯಕ್ತಿ, ಅನುಮಾನಸ್ಪಾದವಾಗಿ ಓಡಾಟ ಕಂಡು ಬಂದರೆ, ಪೊಲೀಸರಿಗೆ ಮಾಹಿತಿ ನೀಡುವಂತೆ ಬ್ಯಾಂಕ್ ಹಾಗೂ ಏಜೆನ್ಸಿ ಸಿಬ್ಬಂದಿಗೆ ಸೂಚಿಸಲಾಗಿದೆ. ಟೋಪಿ, ಮಂಕಿ ಕ್ಯಾಪ್ ಧರಿಸಿ ಬಂದರೆ ಅಲರ್ಟ್ ಆಗಿರಲು ಸೂಚಿಸಲಾಗಿದೆ. ಹಣ ತುಂಬುವ ವಾಹನಗಳು ಬಂದಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.