ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಕುಟಂಬ ಭಾಗವಹಿಸಿತ್ತು. ಮೆಗಾಸ್ಟಾರ್ ಪತ್ನಿ ಸುರೇಖಾ ಕೋನಿಡೆಲ, ರಾಮ್ ಚರಣ್ ತೇಜ ಮತ್ತು ಅವರ ಪತ್ನಿ ಉಪಾಸನಾ ಕೋನಿಡೆಲ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಆಟಗಾರರಿಗೆ ಭೇಟಿಯಾಗಿ ಮನೆಯೂಟ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಕೇಳಿ ಅಭಿಮಾನಿಗಳು ಭಾರಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖ ಒಲಿಂಪಿಕ್ಸ್ ಕ್ರೀಡಾ ಜ್ಯೋತಿ ಹಿಡಿದು ಸಂಭ್ರಮಿಸಿದರು. ಚಿರಂಜೀವಿ ಮತ್ತು ಕುಟುಂಬ ಭಾರತದ ಆಟಗಾರರಿಗಾಗಿ ದೊಡ್ಡ ಬ್ಯಾಗಿನಲ್ಲಿ ‘ಮನೆ ಊಟ’ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಭಾರತದವರಿಗೆ ಉಪ್ಪಿನ ಕಾಯಿ, ರಸಂ, ಪುಲಿಯೋಗರೆ, ಉಪ್ಪಿಟ್ಟು ಕೊಂಡೊಯ್ದಿದ್ದಾರೆ. ಅಲ್ಲಿ ಸಿಗಲ್ಲ ಎಂಬ ಕಾರಣಕ್ಕೆ ಇಲ್ಲಿಂದಲೇ ಉಪ್ಪಿನಕಾಯಿ, ಪುಳಿಯೋಗರೆ, ಉಪ್ಪಿಟ್ಟು, ರಸಂ ಮಿಕ್ಸ್ಗಳನ್ನು ದೊಡ್ಡ ಬ್ಯಾಗಿನಲ್ಲಿ ತುಂಬಿಕೊಂಡು ಹೋಗಿ, ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಟಗಾರರಿಗೆ ಅವುಗಳನ್ನೆಲ್ಲ ಉಚಿತವಾಗಿ ನೀಡಿದ್ದಾರೆ. ಚಿರಂಜೀವಿ ಕುಟುಂಬದ ಈ ಸತ್ಕಾರ್ಯಕ್ಕೆ ಆಟಗಾರರು ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿರಂಜೀವಿ ಅವರ ಪತ್ನಿ ಸುರೇಖಾ ಅವರು ಅತ್ತಾಮಾಸ್ ಕಿಚನ್ ಹೆಸರಿನ ಮೂಲಕ ಆಹಾರ ಉತ್ಪಾದನೆ ಬಿಜಿನೆಸ್ ಆರಂಭಿಸಿದ್ದಾರೆ. ಸುರೇಖಾ ಅವರೇ ತಯಾರಿಸಿರುವ ಉಪ್ಪಿನಕಾಯಿ, ರೆಡಿಮೇಡ್ ಪುಳಿಯೋಗರೆ, ರೆಡಿಮೇಡ್ ಉಪ್ಪಿಟ್ಟು, ರೆಡಿ ಮಿಕ್ಸ್ ರಸಂ, ಪೊಂಗಲ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಮಹಿಳೆಯರು ಈ ಬ್ರ್ಯಾಂಡ್ ನಿಂದಲೇ ಬಿಜಿನೆಸ್ ಮಾಡುತ್ತಿದ್ದಾರೆ ಎನ್ನಲಾಗಿದೆ.