ಕಾರವಾರ: ಕಡಿಮೆ ಅಂಕ ಗಳಿಸಿದ್ದಕ್ಕೆ ಪಾಲಕರು ಬೈದರೆಂದು ಊರು ತೊರೆದಿದ್ದ ವಿದ್ಯಾರ್ಥಿಗಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
ಶಿರಸಿಯ (Sirsi) ಇಬ್ಬರು ಮಕ್ಕಳು ಮುಂಬೈನಲ್ಲಿ (Mumbai) ಪತ್ತೆಯಾಗಿದ್ದಾರೆ. ಶಿರಸಿಯ ಕಸ್ತೂರಬಾ ನಿವಾಸಿಗಳಾದ ಶ್ರೀಶಾ (13), ಪರಿಧಿ(10) ಪತ್ತೆಯಾಗಿದ್ದಾರೆ. ಕಡಿಮೆ ಅಂಕ ಗಳಿಸಿದ್ದಕ್ಕೆ ಪಾಲಕರು ಬೈದು, ಬುದ್ಧಿ ಹೇಳಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಮಕ್ಕಳು ಶಿರಸಿಯಿಂದ- ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಪುಣೆಗೆ ತೆರಳಿ ನಂತರ ಮುಂಬೈಗೆ ತೆರಳಿದ್ದರು ಎನ್ನಲಾಗಿದೆ. ಸದ್ಯ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಕ್ಕಳ ಶೋಧಕ್ಕಾಗಿ ಉತ್ತರ ಕನ್ನಡ ಎಸ್ಪಿ ಎಂ.ಎನ್.ದೀಪನ್ ಆರು ತಂಡಗಳನ್ನು ರಚಿಸಿದ್ದರು. ಸದ್ಯ ಮಕ್ಕಳು ಸಿಕ್ಕಿದ್ದು, ತಂದೆ-ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ.



















