ಬೆಂಗಳೂರು ; ಯಲಹಂಕ ನ್ಯೂಟೌನ್‌ನಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ನಲ್ಲಿ ಮಗುವನ್ನು ಬಿಸಿಲಿನಲ್ಲಿ ಹೊರಗೆ ನಿಲ್ಲಿಸಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ.
ಶಾಲೆಗೆ ತಡವಾಗಿ ಬಂದ ಮಗುವಿಗೆ ಕಠಿಣ ಶಿಕ್ಷೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದರ ವಿಚಾರಣೆಗಾಗಿ ಅಧಿಕಾರಿಗಳು ಶಾಲೆಗೆ ದಾವಿಸಿದ್ದಾರೆ ಎನ್ನಲಾಗಿದೆ.
ಮಗುವಿನ ಪೋಷಕರು ಈ ಬಗ್ಗೆ ಪ್ರಶ್ನೆ ಮಾಡಿದ್ದು, ಸಂಭಾವ್ಯವಾಗಿ, ಶಾಲೆಯ ಆಡಳಿತ ಮಂಡಳಿ ಪ್ರತಿನಿತ್ಯ ತಡವಾಗಿ ಬರುವ ಮಕ್ಕಳಿಗೆ ತೀವ್ರ ಶಿಕ್ಷೆ ನೀಡುತ್ತಿದೆ ಎನ್ನಲಾಗಿದೆ. ದೂರು ದಾಖಲಿಸಲು ಮಕ್ಕಳು ಮತ್ತು ಪೋಷಕರು ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಪಾಕಿಸ್ತಾನ ಕ್ರಿಕೆಟ್‌ನ ಸುವರ್ಣ ಯುಗದ ಸಾರಥಿ ಸರ್ಫರಾಜ್ ಅಹ್ಮದ್ ನಿವೃತ್ತಿ!



















