ಬಳ್ಳಾರಿ: ವಾಹನ ಹರಿದ ಪರಿಣಾಮ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದಿದೆ. ಮಹಾನಗರ ಪಾಲಿಕೆ (Ballari City Corporation) ಕಸ ಸಂಗ್ರಹಿಸುವ ಟಾಟಾ ಏಸ್ ವಾಹನ ಹರಿದ (Accident) ಪರಿಮಾಮ ಮೂರು ವರ್ಷದ ಬಾಲಕಿ ವಿಕ್ಕಿ ಸಾವನ್ನಪ್ಪಿದ್ದಾರೆ.
ನಗರದ ಶೈಲಜಾ- ಸಮರ ದಂಪತಿ ಪುತ್ರ ವಿಕ್ಕಿ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ ಬಾಪೂಜಿ ನಗರದಲ್ಲಿ ಕಸ ಸಂಗ್ರಹಿಸಲು ವಾಹನವೊಂದು ತೆರಳಿದೆ. ಆಗ ರಸ್ತೆ ಬದಿ ಆಟವಾಡುತ್ತಿದ್ದ ವಿಕ್ಕಿ ತಲೆ ಮೇಲೆ ವಾಹನ ಹರಿದಿದೆ. ಕೂಡಲೇ ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


















