ಚಿಕ್ಕಮಗಳೂರು : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಂಪುರ, ಗೊಲ್ಲರಹಟ್ಟಿ, ಶಿವಪುರ. ಲಕ್ಕೇನಹಳ್ಳಿ, ಮುಸ್ಲಾಪುರ ಭಾಗದಲ್ಲಿ ಚಿರತೆ ಸಂಚಾರ ಮಾಡುತ್ತಿತ್ತು. ಜಾನುವಾರು, ಸಾಕು ನಾಯಿಗಳನ್ನ ಚಿರತೆ ಹೊತ್ತಯೊಯ್ಯುತ್ತಿತ್ತು.
ಇದರಿಂದ ಗ್ರಾಮದ ಜನರು ಆತಂಕದಿಂದ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಇದೀಗ ಅರಣ್ಯಾ ಇಲಾಖೆ ಬೀಸಿದ ಬಲೆಗೆ ಚಿರತೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಯೊಬ್ಬ ಮದ್ಯ ಸೇವಿಸಿ ಯದ್ವಾ ತದ್ವ ಕಾರು ಚಾಲನೆ | ಪಾದಚಾರಿ ಸ್ಥಳದಲ್ಲೇ ಸಾವು



















