ಯಾದಗಿರಿ : ಹಾಸ್ಟೆಲ್ ನಲ್ಲಿ ಸಮರ್ಪಕವಾಗಿ ಊಟ ಸಿಗುತ್ತಿಲ್ಲವೆಂದು ರಾತ್ರೋರಾತ್ರಿ ಡಿಸಿ ಕಚೇರಿಯ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಇಂದಿರಾ ಗಾಂಧಿ ನರ್ಸಿಗ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುತ್ತದೆ. ಆದರೂ, ಸಮರ್ಪಕವಾದ ವ್ಯವಸ್ಥೆಗಳಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ, ೬ ತಿಂಗಳಿನಿಂದ ಯಾವುದೇ ಕಿಟ್ ನೀಡಿಲ್ಲ ಹಾಗೂ ಹಾಸ್ಟೆಲ್ ನಲ್ಲಿ ಸ್ವಚ್ಚತೆ ವ್ಯವಸ್ಥೆ ಸರಿಯಿಲ್ಲವೆಂದು ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್ ಸುನೀತಾ ಅವರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.