ಮಂಡ್ಯ : ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ವೃತಾಚರಣೆಯ ಸಂಭ್ರಮ. ಈ ಶುಭದಿನದಂದು ಶ್ರೀರಂಗಪಟ್ಟಣದಲ್ಲಿ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.
ದೇವಿ ಹಾಗೂ ಗರ್ಭಗುಡಿಗೆ ಭಕ್ತರಿಂದ ಸಂಗ್ರಹಿಸಿದ ಸುಮಾರು 3.50ಲಕ್ಷ ರೂಪಾಯಿ ಮೌಲ್ಯವಾಗುವಷ್ಟು ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು, ಐನೂರು ರೂಪಾಯಿ ನೋಟುಗಳಿಂದ ಧನಲಕ್ಷ್ಮೀ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಧನಲಕ್ಷ್ಮೀ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಹರಿದು ಬಂದಿದೆ.



















