ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 19,000 ರನ್ ಪೂರೈಸಿದ ವಿಶೇಷ ಆಟಗಾರರ ಪಟ್ಟಿಗೆ ಪ್ರವೇಶಿಸಿದ್ದಾರೆ. ವಿಲಿಯಮ್ಸನ್ ಇನ್ನಿಂಗ್ಸ್ನ 20 ನೇ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ವಿರುದ್ಧ ಸಿಂಗಲ್ ರನ್ ಗಳಿಸುವ ಮೂಲಕ ಈ ಮೈಲಿಗಲ್ಲನ್ನು ತಲುಪಿದರು.
Kane Williamson becomes the first New Zealand batter to score 𝟏𝟗,𝟎𝟎𝟎 international runs. pic.twitter.com/E9KrgHcyTJ
— CricTracker (@Cricketracker) March 5, 2025
ಅವರು 440 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ನಾಲ್ಕನೇ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ 399 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ತಲುಪಿದರೆ, ಸಚಿನ್ ತೆಂಡೂಲ್ಕರ್ (432 ಇನ್ನಿಂಗ್ಸ್) ಮತ್ತು ಬ್ರಿಯಾನ್ ಲಾರಾ (433 ಇನ್ನಿಂಗ್ಸ್) ನಂತರದ ಸ್ಥಾನದಲ್ಲಿದ್ದಾರೆ.
ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ಮೈಲಿಗಲ್ಲು ತಲುಪಿದ 16ನೇ ವ್ಯಕ್ತಿ ಮತ್ತು ತಮ್ಮ ದೇಶದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 62 ಎಸೆತಗಳಲ್ಲಿ ತಮ್ಮ 48 ನೇ ಅರ್ಧಶತಕ ಗಳಿಸಿದರು, ಎರಡನೇ ವಿಕೆಟ್ಗೆ ರಚಿನ್ ರವೀಂದ್ರ ಅವರೊಂದಿಗೆ ಶತಕದ ಜೊತೆಯಾಟ ನೀಡಿದರು.
ಕಿವೀಸ್ನ ಮಾಜಿ ನಾಯಕ ಪ್ರಸಕ್ತ ವರ್ಷದಲ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಏಳು ಇನ್ನಿಂಗ್ಸ್ಗಳಲ್ಲಿ 68.20 ಸರಾಸರಿಯಲ್ಲಿ 2 ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 341 ರನ್ ಗಳಿಸಿದ್ದಾರೆ.
ಅವರು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಗುಂಪು ಪಂದ್ಯದಲ್ಲಿ ಭಾರತದ ವಿರುದ್ಧ 81 (120) ರನ್ ಗಳಿಸಿದ್ದರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಅವರು 133* (113) ರನ್ ಗಳಿಸಿದ್ದರು.
ಇದನ್ನೂ ಓದಿ: http://Rachin Ravindra : ಗಂಗೂಲಿ, ಧವನ್ ಇರುವ ಎಲೈಟ್ ಪಟ್ಟಿಗೆ ಸೇರಿದ ರಚಿನ್ ರವೀಂದ್ರ
ವಿಲಿಯಮ್ಸನ್ 2010 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ನ್ಯೂಜಿಲೆಂಡ್ನ ಬ್ಯಾಟಿಂಗ್ನ ಬಲವಾದ ಆಧಾರಸ್ತಂಭವಾಗಿದ್ದಾರೆ. ಏಕೆಂದರೆ ಅವರು 48.62 ಸರಾಸರಿಯಲ್ಲಿ 47 ಶತಕಗಳು ಮತ್ತು 152 ಅರ್ಧಶತಕಗಳೊಂದಿಗೆ 19000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಕಿವೀಸ್ ಮಾಜಿ ನಾಯಕ ಟೆಸ್ಟ್ನಲ್ಲಿ 33 ಶತಕಗಳು ಮತ್ತು 37 ಅರ್ಧಶತಕಗಳಿಂದ 54.88 ಸರಾಸರಿಯಲ್ಲಿ 9276 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 163 ಇನ್ನಿಂಗ್ಸ್ಗಳಲ್ಲಿ 14 ಅರ್ಧಶತಕಗಳು ಮತ್ತು 47 ಅರ್ಧಶತಕಗಳಿಂದ 49.11 ಸರಾಸರಿಯಲ್ಲಿ 7100 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟಿ20ಐನಲ್ಲಿ ಅವರು 90 ಇನ್ನಿಂಗ್ಸ್ಗಳಿಂದ 33.44 ಸರಾಸರಿಯಲ್ಲಿ 2575 ರನ್ ಗಳಿಸಿದ್ದಾರೆ ಮತ್ತು 18 ಅರ್ಧಶತಕಗಳೊಂದಿಗೆ 123.08 ಸ್ಟ್ರೈಕ್ ರೇಟ್ ಹೊಂದಿದ್ದಾರೆ.