ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕ್ ನಲ್ಲಿ ನಡೆಯಲಿದೆ. ಆದರೆ, ಪಾಕ್ ಗೆ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
2025 ರ ಫೆಬ್ರವರಿ 19 ಮತ್ತು ಮಾರ್ಚ್ 9 ರ ಮಧ್ಯೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇಲ್ಲಿಯವರೆಗೂ ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಿರಲಿಲ್ಲ. ಭಾರತದ ನಿರ್ಧಾರದ ಮೇಲೆ ವೇಳಾಪಟ್ಟಿ ಪ್ರಕಟಿಸಲು ಐಸಿಸಿ ಚಿಂತನೆ ನಡೆಸಿತ್ತು. ಆದರೆ, ಈಗ ಬಿಸಿಸಿಐ, ಭಾರತ ಸರ್ಕಾರದ ಸೂಚನೆಯನ್ನು ಉಲ್ಲೇಖಿಸಿ, ಪಾಕಿಸ್ತಾನಕ್ಕೆ ಆಟಗಾರರನ್ನು ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಿದೆ ಎಂದು ವರದಿಯೊಂದು ತಿಳಿಸಿದೆ.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ. ತಂಡ ಕಳುಹಿಸದಂತೆ ಭಾರತ ಸರ್ಕಾರದಿಂದ ಸೂಚನೆ ಬಂದಿದೆ ಎಂದು ಐಸಿಸಿಗೆ ತಿಳಿಸಿದೆ. ಹೀಗಾಗಿ ಈಗ ಪಾಕಿಸ್ತಾನವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಬೇಕಾಗುತ್ತದೆ. ಒಂದು ವೇಳೆ ಪಾಕಿಸ್ತಾನ ಈ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸದಿದ್ದರೆ, ಪಾಕ್ ಮಂಡಳಿಯ ಜೊತೆಗೆ ಐಸಿಸಿಗೂ ಭಾರಿ ನಷ್ಟವಾಗುತ್ತದೆ.
ಏಕೆಂದರೆ, ಐಸಿಸಿ ಯಾವುದೇ ಈವೆಂಟ್ ಆಯೋಜಿಸಿದರೂ ಅದಕ್ಕೆ ಪ್ರಮುಖ ಆದಾಯದ ಮೂಲ ಭಾರತ ಆಗಿದೆ. ಹೀಗಾಗಿ ಐಸಿಸಿಗೆ ಭಾರತ ಬೇಕು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವುದು ಅನಿವಾರ್ಯವಾಗಿದೆ.
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುವಂತಾದರೆ, ಭಾರತದ ಪಂದ್ಯಗಳು ಪಾಕಿಸ್ತಾನ್ ಹೊರತು ಪಡಿಸಿ ಬೇರೆಡೆ ನಡೆಯುತ್ತವೆ.