ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಯಾವುದೇ ಎದುರಾಳಿಯನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಈ ನ್ಯೂಜಿಲೆಂಡ್ ವಿರುದ್ಧದ ಗೆಲುವಿನೊಂದಿಗೆ ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ನಲ್ಲಿ ಆಡಲಿದೆ. .
ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿ ಅವರ ಐದು ವಿಕೆಟ್ ಗಳ ಅಮೋಘ ಸಾಧನೆಯ ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 44 ರನ್ ಗಳ ಜಯದೊಂದಿಗೆ ಪಂದ್ಯಾವಳಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿತು. ಗುಂಪು ಹಂತದಲ್ಲಿ ಈಗಾಗಲೇ ಬಾಂಗ್ಲಾದೇಶ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ್ದು ಅದರೊಂದಿಗೆ ಪ್ರಶಸ್ತಿ ಫೇವರಿಟ್ ಎಂಬ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಎನ್ಐ ಜೊತೆ ಮಾತನಾಡಿದ ಗಂಗೂಲಿ “”ಭಾರತದ ತಂಡದ ಬಲವಾದ ಪ್ರದರ್ಶನವನ್ನು ಶ್ಲಾಘಿಸಿದರು, ಸ್ಪರ್ಧೆಯಲ್ಲಿ ಯಾವುದೇ ಸವಾಲನ್ನು ಜಯಿಸುವ ಸಾಮರ್ಥ್ಯ ಭಾರತ ತಂಡಕ್ಕೆ ಇದೆ ಎಂದು ಹೇಳಿದರು.
“ಭಾರತವು 2024ರಲ್ಲಿ ಟಿ 20 ವಿಶ್ವಕಪ್ ಗೆದ್ದಿದೆ. 2023 ರ ಏಕದಿನ ವಿಶ್ವ ಕಪ್ನಲ್ಲಿ ಫೈನಲ್ಗೆ ಪ್ರವೇಶ ಮಾಡಿತ್ತು. ವೈಟ್-ಬಾಲ್ ಕ್ರಿಕೆಟ್ನಲ್ಲಿ ಭಾರತ ಬಲಿಷ್ಠ ತಂಡವಾಗಿದೆ ಹಾಗೂ ಎದುರಾಳಿ ಯಾರೇ ಆಗಿದ್ದರೂ ಗೆಲ್ಲುವ ಸಾಮರ್ಥ್ಯ ಹೊಂದಿದೆ “ಎಂದು ಗಂಗೂಲಿ ಹೇಳಿದರು.
ಸ್ಪಿನ್ ಬೌಲಿಂಗ್ ವಿರುದ್ಧದ ಭಾರತದ ಬ್ಯಾಟರ್ಗಳು ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ 249 ರನ್ಗಳಲ್ಲಿ ಸ್ಪಿನ್ನರ್ಗಳ ವಿರುದ್ಧ 25 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡಿದೆ ಹಾಗೂ ಅಲ್ಲಿ 124 ರನ್ಗಳು ಬಂದಿವೆ. ಇದು ಕಠಿಣ ಪರಿಸ್ಥಿತಿಗಳಲ್ಲಿ ಭಾರತದ ಹೊಂದಾಣಿಕೆ ಅದ್ಭುತವಾಗಿದೆ. ಬೌಲರ್ಗಳು ಶಿಸ್ತುಬದ್ಧ ಪ್ರದರ್ಶನ ನೀಡಿ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ ಎಂದು ಗಂಗೂಲಿ ಹೇಳಿದರು.
ಸೆಮಿಫೈನಲ್ ಪಂದ್ಯ ಖಚಿತ
ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಸೇರ್ಪಡೆಯಾದ ವರುಣ್ ಚಕ್ರವರ್ತಿ, ಸ್ಪಿನ್ ಬೌಲಿಂಗ್ನಲ್ಲಿ ಅದ್ಭುತ ನೀಡಿ ತಮ್ಮ ಅವಕಾಶ ಬಳಸಿಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಅವರು ನ್ಯೂಜಿಲೆಂಡ್ ಬ್ಯಾಟಿಂಗ್ ಕ್ರಮಾಂಕಕ್ಕೆ ಹಾನಿ ಮಾಡಿದ್ದರು. ಏಕದಿನ ಪಂದ್ಯಗಳಲ್ಲಿ ತಮ್ಮ ಮೊದಲ ಐದು ವಿಕೆಟ್ ಸಾಧನೆಯನ್ನು ದಾಖಲಿಸಿದ್ದಾರೆ.
ಈ ಗೆಲುವಿನೊಂದಿಗೆ ಭಾರತ ಮಾರ್ಚ್ 4ರಂದು ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಆಡಬೇಕಾಗಿದೆ. ಪ್ರಸ್ತುತ ಫಾರ್ಮ್ ಮತ್ತು ತಂಡವನ್ನು ಗಮನಿಸಿದರೆ ಆ ಪಂದ್ಯದಲ್ಲಿಯೂ ಭಾರತವೇ ಫೇವರಿಟ್ ಆಗಿದೆ.