ಕರಾಚಿ,ಜ.16, 2025: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟಗೊಂಡಿದೆ. ಇದು 2017ರ ನಂತರ ಆಯೋಜನೆಗೊಂಡಿರುವ ಚಾಂಪಿಯನ್ಸ್ ಟ್ರೋಫಿ(Champions Trophy) ಆಗಿದ್ದು ಕ್ರಿಕೆಟ್ (cricket)ಆರಾಧಕರಲ್ಲಿ ಕುತೂಹಲ ಇಮ್ಮಡಿಗೊಂಡಿದೆ. ಫೆಬ್ರವರಿ 19ರಿಂದ ಆರಂಭವಾಗಲಿದ್ದು ಬಲಿಷ್ಠ ತಂಡಗಳು ಏಕ ದಿನ ಮಾದರಿಯಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಭಾರತ ತಟಸ್ಥ ತಾಣವಾದ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಈ ಎಲ್ಲ ಕುತೂಹಗಳ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಗಳ ಟಿಕೆಟ್ ದರವನ್ನು ಪ್ರಕಟಿಸಿದೆ.
ಪಾಕಿಸ್ತಾನದಲ್ಲಿ ನಡೆಯುವ ಪಾಕ್ ಮತ್ತು ಇತರ ತಂಡಗಳ ನಡುವಿನ ಪಂದ್ಯಗಳ ವಿವಿಧ ಗ್ಯಾಲರಿಗಳ ಟಿಕೆಟ್ ದರವನ್ನು ಕನಿಷ್ಠ 620 ರೂಪಾಯಿಂದ ಗರಿಷ್ಠ 7750 ರೂಪಾಯಿವರೆಗೆ ನಿಗದಿಪಡಿಸಲಾಗಿದೆ. ಇತರ ಪಂದ್ಯಗಳ ಟಿಕೆಟ್ 310 ರಿಂದ ಆರಂಭಗೊಂಡು 5580 ರೂಪಾಯಿ ಇದೆ. ಆದರೆ ದುಬೈನಲ್ಲಿ(Dubai) ನಡೆಯುವ ಭಾರತ(india) ಮತ್ತು ಇತರ ತಂಡಗಳ ನಡುವಿ ಪಂದ್ಯಗಳ ಬೆಲೆಗಳು ಇನ್ನೂ ಬಹಿರಂಗವಾಗಿಲ್ಲ.
ಸಿದ್ಧತೆ ನಿಧಾನ
ಟೂರ್ನಿಗೆ ದಿನ ಹತ್ತಿರವಾಗುತ್ತಿದ್ದರೂ ಲಾಹೋರ್,(Lahore,) ರಾವಲ್ಪಿಂಡಿ (Rawalpindi) ಮತ್ತು ಕರಾಚಿ(Karachi) ಕ್ರೀಡಾಂಗಣಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಕುರಿತು ಸ್ವತಃ ಪಾಕಿಸ್ತಾನ ಮಾಧ್ಯಮಗಳೇ ವರದಿ ಮಾಡುತ್ತಿದೆ. ಮುಂದಿನ ವಾರ ಐಸಿಸಿಯ ಅಧಿಕಾರಿಗಳ ತಂಡವೊಂದು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಭೇಟಿ ನೀಡಲಿದೆ ಎನ್ನಲಾಗಿದೆ. ಐಸಿಸಿ ಅಧಿಕಾರಿಗಳು ಇದನ್ನು ಪರಿಶೀಲಿಸಿದ ಬಳಿಕ ಸ್ಪಷ್ಟ ಚಿತ್ರಣವೊಂದು ಲಭಿಸಬಹುದು. ಒಂದೊಮ್ಮೆ ಕ್ರೀಡಾಂಗಣ ಯೋಗ್ಯವಾಗಿರದಿದ್ದರೆ ಇಡೀ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಇದೆ.