ದಾವಣಗೆರೆ: ಪತ್ನಿ, ಮುದ್ದಾದ ಮಕ್ಕಳು ಇದ್ದರೂ ಪೊಲೀಸಪ್ಪನೊಬ್ಬ ಪರಸ್ತ್ರಿಯ ಸಂಘ ಮಾಡಿ ಈಗ ಶಾಪಕ್ಕೆ ಗುರಿಯಾಗಿರುವ ಘನಟೆ ನಡೆದಿದೆ.
ಹೌದು! ಪತ್ನಿಗೆ ಕೈ ಕೊಟ್ಟು ಪರಸ್ತ್ರಿ ಸಂಘ ಮಾಡಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್(Police Constable)ನನ್ನು ಅಮಾನತ್ತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಬಿಸಿ ಮುಟ್ಟಿಸಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಸಿ 124 ನಂಬರ್ ಪ್ರಸನ್ ಟಿ. ಅಮಾನತ್ತಾದ ಪೇದೆ. ಪತ್ನಿಯಿಂದ ದೂರು ಪಡೆದು ನಂತರ ಹಿರಿಯ ಅಧಿಕಾರಿಗಳಿಂದ ತನಿಖೆ ಮಾಡಿಸಿ ಆರೋಪ ಸತ್ಯವೆಂಬುವುದು ಗೊತ್ತಾಗುತ್ತಿದ್ದಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಪೊಲೀಸ್, ಪರಸ್ತ್ರೀ ಸ್ನೇಹ ಬೆಳೆಸಿಕೊಂಡ ನಂತರ ಕಳೆದ ಕೆಲವು ತಿಂಗಳುಗಳಿಂದ ಮನೆಗೆ ಬಂದಿಲ್ಲ. ಹೀಗಾಗಿ ಒಂದು ಗಂಡು, ಒಂದು ಹೆಣ್ಣು ಮಗಳನ್ನು ಕಟ್ಟಿಕೊಂಡು ಕುಟುಂಬ ನಡೆಸಲು ಅವರ ಪತ್ನಿ ಪರದಾಡಿದ್ದಾರೆ. ಹೀಗಾಗಿ ಬೇರೊಬ್ಬಳೊಂದಿಗೆ ಇರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಆತನ ದೌರ್ಜನ್ಯದಿಂದ ಬೇಸತ್ತು ಪತ್ನಿ ದೂರು ನೀಡಿದ್ದರು. ಹೀಗಾಗಿ ಈ ಕುರಿತು ದಾವಣಗೆರೆ ಎಸ್ಪಿ ತನಿಖೆ ನಡೆಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.