ನವದೆಹಲಿ: ದೇಶದಲ್ಲಿ ಜನಗಣತಿಯೊಂದಿಗೆ ಜಾತಿ ಗಣತಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದಲ್ಲಿ 16 ವರ್ಷಗಳ ನಂತರ ಜನಗಣತಿಯೊಂದಿಗೆ ಜಾತಿಗಣತಿ(Caste Census) ನಡೆಯಲಿದೆ. 34 ಲಕ್ಷ ಗಣತಿದಾರರು, ಸೂಪರ್ವೈಸರ್ಗಳು ಹಾಗೂ 1.3 ಲಕ್ಷ ಜಣಗಣತಿ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಭಾಗಿ ಆಗುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೊಬೈಲ್ ಡಿಜಿಟಲ್ ಗ್ಯಾಜೆಟ್ ಬಳಸಲಾಗುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.