ಬೆಂಗಳೂರು: ಕರ್ನಾಟಕಕ್ಕೆ ತೆರಿಗೆ ವಂಚಿಸುತ್ತಿದ್ದ ಬೇರೆ ರಾಜ್ಯಗಳ ಕಾರುಗಳನ್ನು ಆರ್ ಟಿಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಪಾಂಡಿಚೇರಿ, ದೆಹಲಿ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಪಾಸಿಂಗ್ ಇದ್ದ ಕಾರುಗಳನ್ನು ಬೆಂಗಳೂರು ಆರ್ ಟಿಓ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಗರದ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೇರೆ ರಾಜ್ಯದಲ್ಲಿ ನೊಂದಣಿ ಮಾಡಿಕೊಂಡಿದ್ದ ಕಾರುಗಳು ಕರ್ನಾಟಕಕ್ಕೆ ತೆರಿಗೆ ಕಟ್ಟದೆ ನಗರದಲ್ಲಿ ಓಡಾಡುತ್ತಿದ್ದವು. ಬೇರೆ ರಾಜ್ಯಗಳಲ್ಲಿ ರಸ್ತೆ ತೆರಿಗೆ ಹಾಗೂ ಪಾಸಿಂಗ್ ಶುಲ್ಕ ಕಡಿಮೆ ಕಟ್ಟುತ್ತಿದ್ದರು. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಟ್ಯಾಕ್ಸ್ ಕಟ್ಟದೆ ಕಳ್ಳಾಟ ಆಡುತ್ತಿದ್ದರು. ಈ ಕುರಿತು ಆಪರೇಷನ್ ನಡೆಸಿದ ಆರ್ ಟಿಓ ಅಧಿಕಾರಿಗಳು ಬಿಎಂ ಡಬ್ಲೂ, ಬೆಂಜ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿ ಪರಿಶೀಲನೆ ನಡೆಸಿ, ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ.