ಲಿವರ್ ಪೂಲ್ ತಂಡದ ವಿಜಯೋತ್ಸವದಲ್ಲಿ ಪಾಲ್ಗೊಂಡವರ ಮೇಲೆ ಬ್ರಿಟೀಷ್ ವ್ಯಕ್ತಿಯೋರ್ವ ಕಾರು ಚಲಾಯಿಸಿದ್ದಾನೆ. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂಗ್ಲೆಂಡ್ ನಲ್ಲಿ ನಡೆದಿದ್ದ ಹೈವೋಲ್ಟೇಜ್ ಫುಟ್ಬಾಲ್ ಪಂದ್ಯದಲ್ಲಿ ಲಿವರ್ ಪೂಲ್ ಗೆಲುವು ದಾಖಲಿಸಿತ್ತು. ಇದರ ಸಂಭ್ರಮಾಚರಣೆಗೆ ಅಂತಲೇ ಮೈದಾನದ ಹೊರಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿದ್ರು.

ಇದೇ ವೇಳೆ ಓರ್ವ ಬ್ರಿಟೀಶ್ ವ್ಯಕ್ತಿ ಏಕಾಏಕಿ ಸಂಭ್ರಮಾಚರಣೆಗೆ ನೆರೆದಿದ್ದವರ ಮೇಲೆ ಮಿನಿ ವ್ಯಾನನ್ನ ಚಲಾಯಿಸಿಕೊಂಡು ನುಗ್ಗಿದ್ದಾನೆ. ಪರಿಣಾಮ ಮಕ್ಕಳು, ವೃದ್ಧರು ಸೇರಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಆದ್ರೆ ಆ ವ್ಯಕ್ತಿ ಹೀಗೆ ಕಾರು ಚಲಾಯಿಸಿದ್ಯಾಕೆ ಅನ್ನೋದಿನ್ನೂ ನಿಗೂಢವಾಗದೆ. ಹಾಗಂತಾ ಇಂಗ್ಲೆಂಡ್ ಪೊಲೀಸರು ಇದೊಂದು ಭಯೋತ್ಪಾದಕರ ಕೃತ್ಯವಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.