ರಸ್ತೆಯಲ್ಲಿ ಇಟ್ಟಿದ್ದ ಕಲ್ಲಿನಿಂದಾಗಿ ಎಕ್ಸ್ ಪ್ರೆಸ್ ವೇ ನಲ್ಲಿ ಕಾರು ಅಪಘಾತವಾಗಿರುವ ಘಟನೆ ನಡೆದಿದೆ.
ರಾಮನಗರದ ಜಯಪುರ ಬಳಿ ಈ ಘಟನೆ ನಡೆದಿದೆ. ಎಕ್ಸ್ ಪ್ರೆಸ್ ವೇ ನಲ್ಲಿ ರಾತ್ರಿ ವೇಳೆ ಲಾರಿಗಳನ್ನು ಪಾರ್ಕಿಂಗ್ ಮಾಡಿದ್ದ ಚಾಲಕರು ಟೈಯರ್ ಗೆ ಕಲ್ಲು ಇಟ್ಟು, ಹೋಗುವಾಗ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಈ ಕಲ್ಲಿನ ಮೇಲೆ ಕಾರು ಹತ್ತಿ ಅಪಘಾತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಅನಾಹುತ ತಪ್ಪಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು, NH ಸಿಬ್ಬಂದಿಗಳು ಆಗಮಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.