ಬೆಂಗಳೂರು: ಏಳು ವರ್ಷಗಳ ಬಳಿಕ ಮತ್ತೆ ಖ್ಯಾತ ನಟನ ಪತ್ನಿಗೆ ಮಹಾಮಾರಿ ವಕ್ಕರಿಸಿದೆ.
ಹೌದು, ಬಾಲಿವುಡ್ ನ ಖ್ಯಾತ ತಾರೆ ಆಯುಷ್ಮಾನ್ ಖುರಾನ ಪತ್ನಿ ತಾಹಿರಾ ಕಶ್ಯಪ್ ಎರಡನೇ ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಬರಹಗಾರ್ತಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ತಾಹಿರಾ ತಾವು ಮತ್ತೆ ಕ್ಯಾನರ್ ಜೊತೆ ಹೋರಾಟ ನಡೆಸುತ್ತಿರುವ ಬಗ್ಗೆ ಖುದ್ದು ವಿಷಯ ಹಂಚಿಕೊಂಡಿದ್ದಾರೆ.
7 ವರ್ಷಗಳ ಹಿಂದೆ ನಾನು ಮಹಾಮಾರಿ ಜೊತೆ ಸೆಣಸಿ ಗೆಲುವು ಸಾಧಿಸಿದ್ದೆ. ಆದರೆ, ಈಗ ಮತ್ತೊಮ್ಮೆ ಅದೇ ಹೆಮ್ಮಾರಿ ಜೊತೆ ಎರಡನೇ ಯುದ್ಧ ನಡೆಸುವ ಅನಿವಾರ್ಯತೆ ಎದುರಾಗಿದೆ ಅಂತಾ ತಾಹಿರ ಬರೆದುಕೊಂಡಿದ್ದಾರೆ. ನಾನೀಗ ಮತ್ತೆ ನೋವಿನಿಂದ ಬಳಲುತ್ತಿದ್ದೇನೆ ಅಂತಲೂ ತಾಹಿರ ಹೇಳಿಕೊಂಡಿದ್ದಾರೆ.