ಕೋಲಾರ: ರಾಜ್ಯ ಸರ್ಕಾರ ತನ್ನ ಮೇಲಿನ ಹೊರೆ ತಪ್ಪಿಸುವುದಕ್ಕಾಗಿ 11 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತನ್ನ ಮೇಲಿನ ಹೊರೆ ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದೆ. ಹೀಗಾಗಿ 11 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ.. ಗ್ಯಾರಂಟಿ ಯೋಜನೆಗೆ (Guarantee Scheme) 52 ಸಾವಿರ ಕೋಟಿ ರೂ. ಕೊಡ್ತಿದ್ದಾರೆ. ಗ್ಯಾರಂಟಿ ಕಾರ್ಯಕ್ರಮಕ್ಕೆ ಉಪಯೋಗ ಮಾಡುವುದು ಬೇರೆ. ಗ್ಯಾರಂಟಿ ಸ್ಕೀಮ್ ನಿಂದ ಸರ್ಕಾರಕ್ಕೆ ಏನೂ ಹೊರೆ ಇಲ್ಲ. ಹಾಗಾದ್ರೆ ತೆರಿಗೆ ಹೆಚ್ಚಿಗೆ ಮಾಡಿ ಸಂಗ್ರಹ ಮಾಡಿರುವ ಹಣ ಏನಾಯ್ತು? ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಈ ಗೊಂದಲಕ್ಕೆ ತೆರೆ ಎಳೆಯಬೇಕು. ಈಗಾಗಲೇ ನೋಟಿಸ್ ಹಿಂಪಡೆಯಲು ಸಿಎಂ ಸೂಚನೆ ಕೊಟ್ಟಿದ್ದಾರೆ ಅಂತ ಮಂತ್ರಿನೇ ಹೇಳ್ತಿದ್ದಾರೆ. ಸರ್ಕಾರದ ಕೆಲವೂ ತೀರ್ಮಾನದಿಂದ ಗೊಂದಲ ಸೃಷ್ಟಿಯಾಗಿದೆ. ಉಳ್ಳವರು ವಕ್ಫ್ ಆಸ್ತಿ ವಶಕ್ಕೆ ಪಡೆದಿರುವ ಕುರಿತು ಏನೂ ಕ್ರಮವಾಗಿಲ್ಲ ಎಂದು ಆರೋಪಿಸಿದ್ದಾರೆ.