ಬೆಂಗಳೂರು: ಕಳೆದ ಕೆಲ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಶೇ.1ರಷ್ಟು ಇಳಿಕೆ ಮಾಡಿದೆ. ಇದರಿಂದಾಗಿ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿವೆ. ಹಾಗಾಗಿ, ಬ್ಯಾಂಕುಗಳು ಉಳಿತಾಯ ಖಾತೆ ಹಾಗೂ ಸ್ಥಿರ ಠೇವಣಿ ಅಥವಾ ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ. ಇದರ ಮಧ್ಯೆಯೂ, ಕೆನರಾ ಬ್ಯಾಂಕ್ ಎಫ್ ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿವೆ.
ಪರಿಷ್ಕರಣೆ ಬಳಿಕ, ಸಾಮಾನ್ಯ ಗ್ರಾಹಕರಿಗೆ 3 ಕೋಟಿ ರೂ.ಗಿಂತ ಕಡಿಮೆ ಇರುವ ಎಫ್ ಡಿ ಗಳಿಗೆ ಶೇ.3.25ರಿಂದ ಶೇ.6.50ರವರೆಗೆ ಬಡ್ಡಿ ಸಿಗಲಿದೆ. 444 ದಿನಗಳ ಠೇವಣಿಗೆ ಗರಿಷ್ಠ ಶೇ.6.50ರಷ್ಟು ಬಡ್ಡಿ ದರ ಲಭ್ಯವಿದೆ. ಈ ಎಫ್ ಡಿ ಗಳು ಅವಧಿಗೂ ಮುನ್ನ ಹಣ ಹಿಂಪಡೆಯಲು ಅವಕಾಶ ನೀಡುತ್ತವೆ, ಆದರೆ ಅವಧಿಗೂ ಮುನ್ನ ಮುಕ್ತಾಯಗೊಳಿಸಿದರೆ, ಭಾಗಶಃ ಹಿಂಪಡೆಯುವಿಕೆ ಅಥವಾ ಅವಧಿ ವಿಸ್ತರಣೆಗೆ ಶೇ.1ರಷ್ಟು ದಂಡ ವಿಧಿಸಲಾಗುತ್ತದೆ.
ಹಿರಿಯ ನಾಗರಿಕರಿಗೆ, ಎಫ್‌ಡಿ ದರಗಳು ಶೇ.3.25ರಿಂದ ಶೇ.7ರವರೆಗೆ ಇರಲಿವೆ. 444 ದಿನಗಳ ಅವಧಿಯ ಠೇವಣಿಗೆ ಶೇ.7ರಷ್ಟು ಬಡ್ಡಿ ದರ ಸಿಗಲಿದೆ. ಉಳಿತಾಯ ಖಾತೆ ಮೇಲಿನ ಬಡ್ಡಿಯನ್ನೂ ಕೆನರಾ ಬ್ಯಾಂಕ್ ಪರಿಷ್ಕರಣೆ ಮಾಡಿದೆ. ಈಗ ಉಳಿತಾಯ ಖಾತೆಗಳಿಗೆ ಶೇ.2.55ರಿಂದ ಶೇ.4ರವರೆಗೆ ಬಡ್ಡಿ ನೀಡಲಾಗುತ್ತದೆ. ಇದಕ್ಕೂ ಮೊದಲು ಶೇ.2.7ರಿಂದ ಶೇ.4ರಷ್ಟು ಬಡ್ಡಿ ನೀಡಲಾಗುತ್ತದೆ.
ಆರ್ ಬಿ ಐ ಹಣಕಾಸು ನೀತಿ ಸಮಿತಿ ಸಭೆ ಬಳಿಕ ಬ್ಯಾಂಕ್ ಆಫ್ ಬರೋಡಾ, ಎಸ್ ಬಿ ಐ ಸೇರಿ ಹಲವು ಬ್ಯಾಂಕ್ ಗಳು ಬಡ್ಡಿದರವನ್ನು ಪರಿಷ್ಕರಣೆ ಮಾಡಿವೆ. ರೆಪೊ ದರದ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕುಗಳು ಎಫ್ ಡಿ ಹಾಗೂ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ.



















